More

    ಜೆಡಿಎಸ್ ಉತ್ತರಕನ್ನಡದಲ್ಲಿ ಬಲಿಷ್ಠ

    ಕಾರವಾರ: ಉತ್ತರಕನ್ನಡದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಈಗ ಬೇರ ಪಕ್ಷಗಳ ಅತೃಪ್ತರು ಹಾಗೂ ಹೊಸ ಮುಖಗಳನ್ನು ಸೇರಿಸಿಕೊಂಡು ಉಳಿದೆರಡು ರಾಜಕೀಯ ಪಕ್ಷಗಳಿಗೆ ಪೈಪೋಟಿ ಕೊಡಲು ಸಜ್ಜಾಗಿದೆ.
    ಎರಡು ದಿನ ಜಿಲ್ಲೆಯ ಪ್ರವಾಸ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಪಕ್ಷ ಸಂಘಟನೆಗೆ ಟಾನಿಕ್ ನೀಡಿದ್ದರು.
    ಶುಕ್ರವಾರ ಜಿಲ್ಲೆಯ ಎಲ್ಲ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
    ಹಳಿಯಾಳದಿಂದ ಶ್ರೀಕಾಂತ ೋಟ್ನೇಕರ್, ಕಾರವಾರದಿಂದ ಚೈತ್ರಾ ಕೊಠಾರಕರ್, ಕುಮಟಾದಿಂದ ಸೂರಜ್ ನಾಯ್ಕ ಸೋನಿ, ಭಟ್ಕಳದಿಂದ ನಾಗೇಂದ್ರ ನಾಯ್ಕ, ಶಿರಸಿಯಿಂದ ಉಪೇಂದ್ರ ಪೈ, ಯಲ್ಲಾಪುರದಿಂದ ಡಾ. ನಾಗೇಶ ನಾಯ್ಕ ಅವರ ಹೆಸರು ಜೆಡಿಎಸ್ ಪಟ್ಟಿಯಲ್ಲಿದೆ. ಎಲ್ಲರಿಗೂ ಈಗಾಗಲೇ ‘ಬಿ’ ಾರ್ಮ್ ದೊರೆತೂ ಆಗಿದೆ.
    ಹಳಿಯಾಳ, ಕುಮಟಾ ಹಾಗೂ ಶಿರಸಿಯ ಅಭ್ಯರ್ಥಿಗಳ ಹೆಸರು ಈಗಾಗಲೇ ಚಿರಪರಿಚಿತವಾಗಿದೆ.
    ಕಾರವಾರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೇರಿ ಪಕ್ಷದ ‘ಬಿ’ ಾರ್ಮ್ ಪಡೆದು ಬಂದಿದ್ದಾರೆ.
    ಯಲ್ಲಾಪುರದಲ್ಲಿ ನಿವೃತ್ತ ಪ್ರೊೆಸರ್ ನಾಗೇಶ ನಾಯ್ಕ ಹಾಗೂ ಭಟ್ಕಳದಲ್ಲಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಆಕಾಂಕ್ಷಿಯಾಗಿದ್ದರು. ಈಗ ಅವರ ಹೆಸರೂ ಅಂತಿಮಗೊಂಡಿದೆ.
    ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಕಳೆದ ನಾಲ್ಕು ವರ್ಷಗಳಲ್ಲಿ ನಗಣ್ಯ ಎಂಬ ಮಟ್ಟಿಗೆ ತಲುಪಿತ್ತು.
    2019ರ ಎಂಪಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಿದ್ದ ಆನಂದ ಅಸ್ನೋಟಿಕರ್ ಸೋಲಿನ ನಂತರ ಪಕ್ಷದ ಸಂಘಟನೆಯಿಂದ ದೂರವೇ ಉಳಿದಿದ್ದರು.
    ಸಿದ್ದಾಪುರದಲ್ಲಿ ಶಶಿಭೂಷಣ ಹೆಗಡೆ ಕೂಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಕೆಲ ತಿಂಗಳ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ ಕಾಂಗ್ರೆಸ್ ಸೇರಿದ್ದರು.
    ಗಣಪಯ್ಯ ಗೌಡ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಇತ್ತೀಚೆಗೆ ಅವರು ಅಪಘಾತವೊಂದರಲ್ಲಿ ಗಾಯಗೊಂಡ ಕಾರಣ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿತ್ತು.
    ಕುಮಟಾದಲ್ಲಿ ಸೂರಜ್ ನಾಯ್ಕ ಸೋನಿ ಬಿಟ್ಟರೆ ಉಳಿದವರ‌್ಯಾರೂ ಇಲ್ಲ ಎಂಬ ಪರಿಸ್ಥಿತಿ ಎರಡು ತಿಂಗಳ ಹಿಂದಿತ್ತು. ಈಗ ಹಳಿಯಾಳ ಹಾಗೂ ಕಾರವಾರದಲ್ಲಿ ಕಾಂಗ್ರೆಸ್‌ನ ಅಸಮಾಧಾನಿತರು ಜೆಡಿಎಸ್ ಸೇರಿದ್ದಾರೆ.

    ರೂಪಾಲಿಗೆ ಮತ್ತೆ ಎದುರಾಳಿ ಜೆಡಿಎಸ್ ಅಭ್ಯರ್ಥಿ

    ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ಏಳು ವರ್ಷದ ಹಿಂದೆ ಜಿಪಂ ಚುನಾವಣೆಯಲ್ಲಿ ಸೆಣಸಿದ್ದ ಚೈತ್ರಾ ಕೊಠಾರಕರ್ ಈ ಬಾರಿ ಮತ್ತೊಮ್ಮೆ ರೂಪಾಲಿ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.
    2016ರಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಚೆಂಡಿಯಾ ಕ್ಷೇತ್ರದಿಂದ ಚೈತ್ರಾ ಕೊಠಾರಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
    ಅವರ ಎದುರು ರೂಪಾಲಿ ನಾಯ್ಕರು ಪಕ್ಷೇತರವಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts