Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ರಾಜ್ಯಾಧ್ಯಕ್ಷ ವಿಶ್ವನಾಥ್​ಗೆ ಜೆಡಿಎಸ್​ನಿಂದ ಆಯುಧ ಪೂಜೆ ಕೊಡುಗೆ: ಅಷ್ಟಕ್ಕೂ ಏನದು ಗಿಫ್ಟ್​?

Wednesday, 17.10.2018, 1:17 PM       No Comments

ಬೆಂಗಳೂರು: ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಹುಣಸೂರು ಶಾಸಕ ಎ.ಎಚ್​.ವಿಶ್ವನಾಥ್​ ಅವರಿಗೆ ಪಕ್ಷ ಸಂಘಟನಾ ಕಾರ್ಯಕ್ಕಾಗಿ ಹೊಸ ಇನ್ನೋವಾ ಕ್ರಿಸ್ಟಾ ಕಾರು ನೀಡಿದೆ.

ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾದ ರಾಜ್ಯಾಧ್ಯಕ್ಷರಿಗೆ ಹೊಸ ಕಾರು ನೀಡುವ ಪ್ರಸ್ತಾವವನ್ನು ರಾಷ್ಟ್ರಾಧ್ಯಕ್ಷರೂ ಆದ, ಮಾಜಿ ಪ್ರಧಾನಿ ದೇವೇಗೌಡರು ಪಕ್ಷದ ಮುಂದೆ ಇಟ್ಟಿದ್ದರು. ಅಂತಿಮವಾಗಿ ಇಂದು ವಿಶ್ವನಾಥ್​ ಅವರಿಗೆ ಹೊಸ ಕಾರು ನೀಡಲಾಗಿದೆ.

ಕಳೆದ ತಿಂಗಳು ಹಾಸನ ಹೊರ ವಲಯದ ರೆಸಾರ್ಟ್​ವೊಂದರಲ್ಲಿ ನಡೆದಿದ್ದ ಜೆಡಿಎಸ್​ನ ಅನೌಪಚಾರಿಕ ಶಾಸಕಾಂಗ ಸಭೆಯಲ್ಲಿ ಕಾರು ಖರೀದಿಸುವ ಪ್ರಸ್ತಾವವನ್ನು ದೇವೇಗೌಡರು ಪಕ್ಷದ ಶಾಸಕರೆದುರು ಇಟ್ಟಿದ್ದರು. ಮೊದಲಿಗೆ ಟೊಯೊಟಾ ಫಾರ್ಚುನರ್​ ಕಾರನ್ನು ನೀಡುವ ಬಗ್ಗೆ ದೇವೇಗೌಡರು ಇಚ್ಛಿಸಿದ್ದರು. ಅಲ್ಲದೆ, ಇದಕ್ಕಾಗಿ ಶಾಸಕರು ಕೈಲಾದಷ್ಟು ಆರ್ಥಿಕ ನೆರವು ನೀಡಬೇಕಾಗಿ ಮನವಿ ಮಾಡಿದ್ದರು ಎನ್ನಲಾಗಿದೆ.

ಆದರೆ, ಫಾರ್ಚೂನರ್​ ಪಡೆಯಲು ಒಪ್ಪದ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಅವರು, ಇನ್ನೋವಾ ಕ್ರಿಸ್ಟಾ ಸಾಕು ಎಂದಿದ್ದರು. ಫಾರ್ಚುನರ್​ನ ನಿರ್ವಹಣೆ ವೆಚ್ಚದಾಯಕ ಎಂದು ವಿಶ್ವನಾಥ್​ ಸಭೆಯಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಅವರ ಇಷ್ಟದಂತೆ ಫಾರ್ಚುನರ್​ಗಿಂತಲೂ ಕಡಿಮೆ ಮೌಲ್ಯದ ಟೊಯೋಟಾ ಕ್ರಿಸ್ಟಾ ಕಾರನ್ನು ಆಯುಧ ಪೂಜೆಗೆ ಮುನ್ನಾದಿನ ಜೆಡಿಎಸ್​ ನೀಡಿದೆ.

ಇಂದು ಜೆಡಿಎಸ್​ ಪ್ರಧಾನ ಕಚೇರಿಗೆ ತರಲಾದ ಕಾರಿಗೆ ದೇವೇಗೌಡರು ಪೂಜೆ ಸಲ್ಲಿಸಿದ್ದಾರೆ. ಆದರೆ, ಪೂಜೆಗೆ ವಿಶ್ವನಾಥ್​ ಅವರು ಗೈರಾಗಿದ್ದು, ದೇವೇಗೌಡರು ಕಾರಿನ ಕೀಲಿಕೈಗಳನ್ನು ಪಕ್ಷದ ಕಚೇರಿಯಲ್ಲಿಟ್ಟು ತೆರಳಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದಿಂದಲೇ ಕಾರು ಕೊಡಲಾಗುತ್ತದೆ. ಜೆಡಿಎಸ್ ನಲ್ಲಿ ಈವರೆಗೆ ಹೀಗೆ ಕಾರ್ ಕೊಟ್ಟಿರಲಿಲ್ಲ.

Leave a Reply

Your email address will not be published. Required fields are marked *

Back To Top