ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜೆಡಿಎಸ್​ ಮುಖಂಡ

ಮಂಡ್ಯ:ಸಾಲಭಾದೆ ತಾಳಲಾರದೆ ಜೆಡಿಎಸ್​ ಮುಖಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕೇಗೌಡನದೊಡ್ಡಿ ನಿವಾಸಿ ಲೋಕೇಶ್​ (40) ಮೃತ.

ಲೋಕೇಶ್​ ಮಹೀಂದ್ರಾ ಟ್ರ್ಯಾಕ್ಟರ್​ ಶೋರೂಂ ನಡೆಸುತ್ತಿದ್ದರು. ಕಳೆದ ನಗರಸಭೆ ಚುನಾವಣೆಯಲ್ಲಿ ಮಂಡ್ಯದ 34 ನೇ ವಾರ್ಡ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಸ್ವರ್ಣಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ಇಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ಪೂರ್ವ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.