ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

ಮಂಡ್ಯ: ಜಿಲ್ಲಾ ಪಂಚಾಯಿತಿ ಸದಸ್ಯೆ ತೊಪ್ಪನಹಳ್ಳಿ ಲಲಿತಾ ಅವರ ಪತಿ ಜೆಡಿಎಸ್​ ಮುಖಂಡ ಪ್ರಕಾಶ್​ ಎಂಬುವವರನ್ನು ದುಷ್ಕರ್ಮಿಗಳು ಹಾಡ ಹಗಲೇ ಹತ್ಯೆಗೈದಿದ್ದಾರೆ.

ಸೋಮವಾರ ಮಧ್ಯಾಹ್ನ ಮಂಡ್ಯ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತಮ್ಮ ಕಾರಿನಲ್ಲಿ ಕುಳಿತಿದ್ದ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಪ್ರಕಾಶ್​ ಕಾರಿನಲ್ಲೇ ಮೃತರಾಗಿದ್ದಾರೆ.

ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ವರ್ಷದ ಹಿಂದೆ ಫ್ಲೆಕ್ಸ್​ ಹಾಕುವ ವಿಚಾರವಾಗಿ ತೊಪ್ಪನಹಳ್ಳಿಯಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ನ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ಇಬ್ಬರು ಮೃತಪಟ್ಟಿದ್ದರು. ಇದೇ ಕಾರಣವಾಗಿ ಗ್ರಾಮದಲ್ಲಿ ಅಶಾಂತಿ ಮನೆ ಮಾಡಿತ್ತು. ಹೀಗಾಗಿ ಪೊಲೀಸರು ಹಲವು ದಿನಗಳ ಕಾಲ ಗ್ರಾಮದಲ್ಲೇ ಉಳಿದು, ಶಾಂತಿ ಸಭೆ ನಡೆಸಿದ್ದರು.

ಇನ್ನು ತಮ್ಮ ಪಕ್ಷದ ಮುಖಂಡನೊಬ್ಬನ ಹತ್ಯೆ ಕುರಿತು ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಪೊಲೀಸ್​ ಅಧಿಕಾರಗಳೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಾ, ಆರೋಪಿಗಳನ್ನು ಶೂಟೌಟ್​ ಮಾಡಿ ಎಂದು ಆದೇಶಿಸಿದ್ದಾರೆ. ಅವರ ಫೋನ್​ ಸಂಭಾಷಣೆಯ ವಿಡಿಯೋ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ಸಿಎಂ ಅವರ ಈ ಅದೇಶ ಸದ್ಯ ಚರ್ಚೆಗೆ ಗ್ರಾಸವಾಗಿದೆ.

One Reply to “ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ”

  1. ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್ ನವರನ್ನು ಕೊಂದವರಿಗೆ ಕರೀಗೌಡ ಸನ್ಮಾನ ಮಾಡಿ ಎಂದು ಹೇಳುತ್ತಾನೇನೋ?

Comments are closed.