ರೇವಣ್ಣಂಗೆ ಕ್ಯಾಲೆಂಡರ್ ಸಿಕ್ಕಿಲ್ವಂತೆ

ಬೆಂಗಳೂರು: ಮೈತ್ರಿ ಸರ್ಕಾರದ ಪಾಲುದಾರ ಪಕ್ಷದ 8 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿ, ಖಾತೆಗಾಗಿ ಕಾಯುತ್ತಿದ್ದಾರೆ. ಆದರೆ ಜೆಡಿಎಸ್ ಪಾಲಿನ 2 ಹುದ್ದೆಗಳಿಗೆ ಶಾಸಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಹೊಸ ಸಚಿವರ ನೇಮಕಕ್ಕೆ ಮುಹೂರ್ತ ಫಿಕ್ಸ್ ಮಾಡಲು ಸಚಿವ ಎಚ್.ಡಿ. ರೇವಣ್ಣರಿಗೆ ಇನ್ನೂ ಹೊಸ ಕ್ಯಾಲೆಂಡರ್ ಪ್ರಿಂಟ್ ಆಗಿಲ್ಲವಂತೆ! ಸ್ವತಃ ರೇವಣ್ಣ ಅವರೇ ಈ ವಿಷಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಯಾವಾಗ ಸಂಪುಟ ವಿಸ್ತರಣೆ ಮಾಡಬೇಕೆಂದು ಮಾಧ್ಯಮದವರೇ ಪಂಚಾಂಗ ನೋಡಿ ಹೇಳಿದರೆ ಒಳ್ಳೆಯದು. ಹೊಸ ವರ್ಷದ ಪಂಚಾಂಗ ಇನ್ನೂ ಬಂದಿಲ್ಲ. ಬಂದ ಮೇಲೆ ಅದನ್ನು ನೋಡಿಕೊಂಡು ಜೆಡಿಎಸ್ ಪಾಲಿಗೆ ಬಂದಿರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುತ್ತೇವೆ. ಮಾಧ್ಯಮದವರು ಈಗ ಕ್ರಿಸ್​ವುಸ್, ಹೊಸ ವರ್ಷ ಆಚರಿಸಲಿ ಎಂದು ನಗುತ್ತಲೇ ಕಾಲೆಳೆದರು.