More

  ಜೆಡಿಎಸ್​ ಸಂಘಟನೆಗೆ ರೆಡಿಯಾಗಿದೆ ಹೊಸ ಐಡಿಯಾ! ಮಾಹಿತಿ ಹೊರಹಾಕಿದ ದೇವೇಗೌಡ

  ಬೆಂಗಳೂರು: ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ನಂತರವೂ ಜನ ಪಕ್ಷವನ್ನು ಉಳಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಹೊಸ ಆಲೋಚನೆಯೊಂದಿಗೆ ಸಂಕ್ರಾಂತಿ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ ಎಂದರು.

  ಜ.7ರಂದು ನಡೆಯಲಿರುವ ಸಭೆಯಲ್ಲಿ ಕುಮಾರಸ್ವಾಮಿ ತಮ್ಮ ಯೋಜನೆಗಳನ್ನು ವಿವರಿಸುತ್ತಾರೆ. ಸಂಕ್ರಾಂತಿ ಬಳಿಕ ಅದಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ ದೇವೇಗೌಡ, ಪಕ್ಷದಲ್ಲಿನ್ನು ಯಾರು ಕೆಲಸ ಮಾಡ್ತಾರೋ ಅವರಿಗೆ ಮಾತ್ರ ಜವಾಬ್ದಾರಿ ನೀಡಲಾಗುವುದು. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ನಂತರವೂ ಜನ ಪಕ್ಷವನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗಿದೆ. ತಮಿಳುನಾಡಿನಲ್ಲಿ ಕರುಣಾನಿಧಿ ಬಳಿಕ ಸ್ಟಾಲಿನ್, ಬಿಹಾರದಲ್ಲಿ ಲಾಲೂ ಪ್ರಸಾದ್ ಬಳಿಕ ತೇಜಸ್ವಿ ಪ್ರಾದೇಶಿಕ ಪಕ್ಷ ಉಳಿಸಿಕೊಂಡಿದ್ದಾರಲ್ಲವೇ? ಎಂದು ಉದಾಹರಣೆ ನೀಡಿದರು. ಇದನ್ನೂ ಓದಿರಿ ರಾಜಕೀಯ ತುಂಬಾ ಕಷ್ಟ… ಎಂದ ಅಣ್ಣಾಮಲೈ!

  ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮಾತಾಡುತ್ತಾರೆ. ಇದಕ್ಕೆ ಕುಮಾರಸ್ವಾಮಿ, ರೇವಣ್ಣ ಕಾರಣನಾ? ವೈಯಕ್ತಿಕವಾಗಿ ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಬಿಜೆಪಿ ಜತೆ ವಿಲೀನ ಅಥವಾ ಮೈತ್ರಿ ವಿಚಾರದ ಬಗ್ಗೆ 3 ತಿಂಗಳಿಂದ ಹಲವು ವ್ಯಾಖ್ಯಾನ ನಡೆದಿದೆ. ಇದನ್ನು ಮನರಂಜನೆ ಅಂತ ಹೇಳಬಹುದೇನೋ ಎಂದು ದೇವೇಗೌಡ ವ್ಯಂಗ್ಯವಾಡಿದರು.

  ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೊರಟಿದ್ದರು. ಆಗ ನಾವು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲವೇ? ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ, ನಾನೇ ಕಾರಣ. ಈ ಸಲ ನನ್ನ ಜಾತ್ಯತೀತತೆ ಪರೀಕ್ಷೆ ಮಾಡಲಿ ಎಂದು ಸವಾಲು ಹಾಕಿದರು. ಒಬ್ಬ ಕನ್ನಡಿಗ ಪ್ರಧಾನಿ ಆಗೋ ಸಂದರ್ಭ ಬಂತು. ನಿಜವಾಗಿ ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ, ಅಪೇಕ್ಷೆ ಇರಲಿಲ್ಲ, ಅದು ವಿಧಿ ನಿಯಮ. ನನ್ನ ರಾಜೀನಾಮೆ ನಂತರ ನನ್ನ ಬಿಟ್ಟು ಸರ್ಕಾರ ಮಾಡಲಿಲ್ಲವೇ? ಕಾಲ ಹೀಗೆ ಇರುವುದಿಲ್ಲ ಎಂದರು. ಇದನ್ನೂ ಓದಿರಿ ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

  ಸಭಾಪತಿ ರಾಜೀನಾಮೆ ವಿಚಾರದಲ್ಲಿ ನನ್ನ ಜಾತ್ಯತೀತ ಬದ್ಧತೆ ಪ್ರಶ್ನೆ ಮಾಡಿದ್ದಾರೆ. ಇವರು ಮಾಡ್ತಿರೋದು ಹಾಗಾದ್ರೆ ಏನು? 130 ಇದ್ದವರು 78 ಯಾಕೆ ಬಂದ್ರು? ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಏನಾಯ್ತು? ಜೆಡಿಎಸ್ ಜತೆ ಹೋಗಿದ್ದಕ್ಕೆ ಅಂತಾ ಹೇಳ್ತೀರಲ್ಲ, ಹಾಸನದಲ್ಲಿ ಕಾಂಗ್ರೆಸ್ ಏನಾಗಿದೆ ನೋಡಿಕೊಳ್ಳಿ. ಅಲ್ಲಿ ಒಂದು ನಗರಸಭೆ ಚುನಾವಣೆಯಲ್ಲಿ ಗೆಲ್ಲೋಕೆ ಆಗಲಿಲ್ಲ. ಇದು ಆನಂದವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರು ಹೇಳದೆ ದೇವೇಗೌಡ ಹರಿಹಾಯ್ದರು.

  ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಸಭಾಪತಿ ಮಾಡೋಣ ಎಂದಿದ್ದರು. ನಾನು ಬಸವರಾಜ್ ಹೊರಟ್ಟಿ ಮಾಡೋಣ ಎಂದೆ. ಆದರೆ, ಇವರಿಬ್ಬರು ಬೇಡ ಎಂದು ಬೇರೆ ಹೆಸರನ್ನ ದೆಹಲಿಯ ನಾಯಕರ ಮೂಲಕ ಪೋನ್ ಮಾಡಿಸಿ ನನಗೆ ಹೇಳಿಸಲಿಲ್ಲವೇ? ಆಗ ನಾವು ಉಪಸಭಾಪತಿ ಸ್ಥಾನಕ್ಕೆ ಒಪ್ಪಿಕೊಂಡಿಲ್ಲವೇ? ಎಂದರು.

  ಶಿರಾ ಉಪ ಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ನಮಗೆ ಇನ್ನು ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಇದೆ. ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

  ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…

  ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts