Friday, 16th November 2018  

Vijayavani

Breaking News

ಜೆಡಿಎಸ್​ನ 30 ಕಾರ್ಯಕರ್ತರ ವಿರುದ್ಧ ಎಫ್​ಐಆರ್​

Wednesday, 12.09.2018, 7:50 AM       No Comments

ಹುಬ್ಬಳ್ಳಿ: ತೈಲಬೆಲೆ ಏರಿಕೆ ಖಂಡಿಸಿ ಸೆ.10ರಂದು ನಡೆದ ಭಾರತ್​ ಬಂದ್​ ವೇಳೆ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಕಚೇರಿಗೆ ಮುತ್ತಿಗೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್​ನ 30 ಕಾರ್ಯಕರ್ತರ ಮೇಲೆ ಎಫ್​ಐಆರ್​ ದಾಖಲಾಗಿದೆ.
ಬಂದ್​ ವೇಳೆ ಸಂಸದ ಪ್ರಲ್ಹಾದ್​ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಲ್ಲದೆ, ಪ್ರಧಾನಿ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಹೀಗಾಗಿ ಜೆಡಿಎಸ್ ಪಾಲಿಕೆ ಸದಸ್ಯ ರಾಜನ್ ಕೊರವಿ ಹಾಗೂ ಪಕ್ಷದ ಕಾರ್ಯರ್ತ ನವೀನ ಮುನಿಯಪ್ಪ ಸೇರಿ ಒಟ್ಟು ಜೆಡಿಎಸ್​ನ 30 ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ-ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿಯವರು ಪೊಲೀಸರಿಗೆ ದೂರು ನೀಡಿದ್ದರು. ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top