More

    ಪಕ್ಷ ಸಂಘಟಿಸಿದರೂ ಜೆಡಿಎಸ್‌ನಲ್ಲಿ ಮೂಲೆಗುಂಪು: ಕರಪತ್ರದಲ್ಲಿ ಬಂಡಾಯ ಅಭ್ಯರ್ಥಿ ಚಿಕ್ಕಣ್ಣ ನೋವಿನ ನುಡಿ

    ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಗರಸಭೆ ಮಾಜಿ ಅಧ್ಯಕ್ಷ, ಮುಡಾ ಮಾಜಿ ಸದಸ್ಯ ಎಂ.ಜೆ.ಚಿಕ್ಕಣ್ಣ ಪ್ರಚಾರದ ಕರಪತ್ರ ಮೂಲಕ ಪಕ್ಷ ಹಾಗೂ ವರಿಷ್ಠರ ವಿರುದ್ಧ ತಮ್ಮ ಅಸಮಾಧಾನದ ಮಾತುಗಳನ್ನು ಹೊರಹಾಕುತ್ತಿದ್ದಾರೆ.
    ದಳಪತಿಗಳ ವಿರುದ್ಧ ಚುನಾವಣಾ ಪ್ರಚಾರದ ಕರಪತ್ರದಲ್ಲಿ ಹಲವು ಮಾಹಿತಿ ಹಂಚಿಕೊಂಡಿರುವ ಚಿಕ್ಕಣ್ಣ, ಚುನಾವಣೆ ಬಂದಾಗ ಮಾತ್ರ ರಾಜಕಾರಣಗಳಿಗೆ ಮಂಡ್ಯ ಜಿಲ್ಲೆ ನೆನಪಾಗುತ್ತದೆ. ಮಂಡ್ಯ ಒಂದು ಕಣ್ಣು, ಹಾಸನ ಮತ್ತೊಂದು ಕಣ್ಣು ಎನ್ನುವ ದೊಡ್ಡ ರಾಜಕಾರಣಿಗಳು, ಹಾಸನಕ್ಕೆ ಮಾಡಿದ ಕೆಲಸವೆಷ್ಟು?. ಮಂಡ್ಯ ಮಾಡಿದ ಕೆಲಸವೆಷ್ಟು? ಎಂಬುದನ್ನು ತಿಳಿಸಲಿ. ನಾನು ನಗರಸಭೆ ಸದಸ್ಯ, ಅಧ್ಯಕ್ಷನಾಗಿ ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದ್ದೇನೆ. ಜತೆಗೆ 30 ವರ್ಷದಿಂದ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷದ ಬ್ಯಾನರ್ ಕಟ್ಟಿಸಿ, ಕರಪತ್ರ ಹಂಚಿಸಿ ಸಂಘಟನಾ ಚಟುವಟಿಕೆ ನಡೆಸಿದ್ದೇನೆ. ಮಾತ್ರವಲ್ಲದೆ ಎಚ್.ಡಿ.ಕುಮಾರಸ್ವಾಮಿ ಹೆಸರಿನಲ್ಲಿ ಅಭಿಮಾನಿ ಸಂಘ ಸ್ಥಾಪಿಸಿ ಅದರಡಿ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮ ಮತ್ತು ಬಡ ಜನತೆಗೆ ಪೌಷ್ಠಿಕ ಆಹಾರ, ವಸ್ತ್ರ ವಿತರಣೆ, ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಜತೆಗೆ ಶಾಲಾ ಶುಲ್ಕ ಪಾವತಿಸಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ಆದರೂ ನನ್ನನ್ನು ಕಡೆಗಣಿಸಿದ್ದು ಬೇಸರ ತರಿಸಿತು ಎಂದು ನೋವು ತೋಡಿಕೊಂಡಿದ್ದಾರೆ.
    ಪಕ್ಷದ ಕಾರ್ಯಕರ್ತನಾಗಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಜನ್ನಮನ್ನಣೆ ಗಳಿಸಿದರೂ ಪಕ್ಷ ನನ್ನನ್ನು ಮೂಲೆಗುಂಪು ಮಾಡಿತು. ಈ ಕೆಟ್ಟ ಬೆಳವಣಿಗೆಯಿಂದ ಬೇಸತ್ತ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿವಾರ್ಯವಾಗಿತ್ತು. ಆದ್ದರಿಂದ ನನಗೆ ಅವಕಾಶ ನೀಡುವ ಮೂಲಕ ಸೇವೆ ಮಾಡಲು ಸಹಕರಿಸಬೇಕೆಂದು ಎಂ.ಜೆ.ಚಿಕ್ಕಣ್ಣ ಕರಪತ್ರದ ಮೂಲಕ ಮನವಿ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts