ಬೂತ್​ಗೆ 5 ಲಕ್ಷ, ಮತದಾನದ ದಿನ ಮಟನ್ ಊಟ: ಸಂಸದರ ಪುತ್ರ ಚೇತನ್​ಗೌಡ- ಪಿ.ರಮೇಶ್ ಸಂಭಾಷಣೆ ಆಡಿಯೋ ವೈರಲ್​

ಮಂಡ್ಯ: ಪ್ರತಿ ಬೂತ್​ಗೆ 5 ಲಕ್ಷ ಕೊಡ್ತಾರೆ, ಮತದಾನದ ದಿನ ಊಟಕ್ಕೆ ಮಟನ್, ಕೋಳಿ ಕೊಡ್ತಾರೆ. ಅವರ ಮನೆಗೆ ಇದುವರೆಗೂ ಇನ್​ಕಮಿಂಗ್ ಇತ್ತು. ಈಗ ಔಟ್ ಗೋಯಿಂಗ್ ಆಗ್ತಿದೆ. 150 ಕೋಟಿ ರೂ. ಏನ್ ತಮಾಷೆನೇನಯ್ಯ, ನಂಬಲಾಗುತ್ತಿಲ್ಲ…

-ಹೀಗೊಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಸದ ಎಲ್.ಆರ್.ಶಿವರಾಮೇಗೌಡ ಪುತ್ರ ಚೇತನ್​ಗೌಡ ಹಾಗೂ ಬೆಂಗಳೂರಿನ ಪಿ.ರಮೇಶ್ ನಡುವಿನ ಸಂಭಾಷಣೆ ಎನ್ನಲಾಗುತ್ತಿದೆ. ಚೇತನ್​ಗೌಡ ಮಾತು ಆರಂಭಿಸಿ ಗುತ್ತಿಗೆದಾರರಿಗೆ ಕೈಯಿಂದ ಹಾಕಂಡ್ ಚುನಾವಣೆ ಮಾಡಿ, ಕ್ಷೇತ್ರಕ್ಕೆ ಸಾವಿರ ಕೋಟಿ. ಅನುದಾನ ಬಿಡುಗಡೆ ಆಗಿದೆ. ನಿಮಗೆ ಕೊಡ್ತೇವೆಂದು ಹೇಳಿದ್ದಾರಂತೆ… ಎನ್ನುತ್ತಿದ್ದಂತೆ ರಮೇಶ್-ಬೂತ್​ಗೆ 5 ಲಕ್ಷ ಅಂದರೆ ಎಂಗಯ್ಯ, ಜಗತ್ತಿನಲ್ಲುಂಟ ಎಂದು ಉತ್ತರಿಸುತ್ತಾರೆ.

ರಮೇಶ್: ನಿಮ್ಮಪ್ಪ ಯಾಕ್ ಅಂಗೆಲ್ಲ ಮಾತಾಡ್ತನಯ್ಯ?

ಚೇತನ್​ಗೌಡ: ತಪ್ಪೇನಿದೆ ಗುರು, ಆಯಮ್ಮ ಮಾತಾಡೋ ರೀತಿ ನೋಡ್ರಿ, 60 ವರ್ಷ ರಾಜಕಾರಣ ಮಾಡಿರೋರಂತೆ…

ರಮೇಶ್: ಅದು ಮೆಚ್ಯುರಿಟಿ ಕಣಯ್ಯ, ಆ ಹುಡುಗ (ನಿಖಿಲ್​) ನನ್ನ ಮಗನಿಗಿಂತ ಚಿಕ್ಕವನು, ಈಗ ನಿಖಿಲ್​ಗೆ ಅವಶ್ಯಕತೆ ಇರಲಿಲ್ಲ. ನಿಮ್ಮಪ್ಪನಿಗೆ ಕೊಡಬಹುದಿತ್ತು. ಆಗ ಆಯಮ್ಮ ನಿಲ್ಲುತ್ತಿರಲಿಲ್ಲ. ‘ನಾನು ಮತ್ತು ನನ್ನಮ್ಮ ಅಂಬರೀಷ್ ಮನೆಗೆ ಹೋದಾಗ ಸುಮಲತಾ ನಮ್ಮ ಬಗ್ಗೆ ನಿರ್ಲಕ್ಷ್ಯಂದ ಮಾತನಾಡಿದರá-’ ಎಂದು ಚೇತನ್​ಗೌಡ ದೂರುತ್ತಾರೆ. ರಮೇಶ್ ಅಂಬರೀಷರನ್ನು ಸಮರ್ಥಿಸಿಕೊಳ್ಳುವ ವೇಳೆಗೆ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಫೋನ್ ಕಟ್ ಆಗುತ್ತದೆ.

ಯಾರಿಗಾದ್ರೂ ಹಾಕೊಟ್ಟುಬಿಟ್ಟಿರಾ?

ಮತ್ತೊಂದು ಆಡಿಯೋದಲ್ಲಿ ‘ನೀವು ನನ್ನ ಡ್ಯಾಡಿ ಸಮಾನ ಅಂತ ಹೇಳಿದ್ದೇನೆ. ನಿನ್ನ ಕೈಮುಗಿತ್ತೀನಿ. ಯಾರಿಗಾದರೂ ಹಾಕಿಬಿಟ್ಟಿಯ ಗುರು. 20 ವರ್ಷ ಅವರಿಗೆ, ರಮ್ಯಾಗೆ ಕೊಟ್ಟು ಹಾಳಾಗಿದ್ದೇವೆ. ಸಿನಿಮಾದವರು ಕೈಗೆ ಸಿಗಲ್ಲ. 18ರ ನಂತರ ಮದುವೆ, ಸಾವಿಗೆ ಇವರು ಬರ್ತಾರಾ’ ಎನ್ನುತ್ತಾರೆ ಚೇತನ್​ಗೌಡ.

ಪಿ.ರಮೇಶ್: ಆ ಹುಡುಗನಿಗೆ ಪಂಚೆ ಉಡಲು ಬರುತ್ತಿಲ್ಲ.

ಚೇತನ್​ಗೌಡ: ಮುಂದೆ ಕಲೀತಾನೆ, ಅವನಿಂದೆ 8 ಶಾಸಕರಿದ್ದಾರೆ.

ರಮೇಶ್: ಯಾವ ಎಮ್ಮೆಲ್ಲೆಗಳು, ಈಗ ಚುನಾವಣೆ ನಡೆದರೆ ಅವರ್ಯಾರೂ ಗೆಲ್ಲಲ್ಲ, ಜೆಡಿಎಸ್ ಕೂಡ ಇರಲ್ಲ.

ಚೇತನ್​ಗೌಡ: ನಿಖಿಲ್ ಕಾಂಗ್ರೆಸ್​ಗೆ ಬರುತ್ತಾನೆ.

ರಮೇಶ್: ಕುಟುಂಬ ರಾಜಕಾರಣದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಶಿವರಾಮೇಗೌಡ, ಮುದ್ದುಹನá-ಮೇಗೌಡ ಒಕ್ಕಲಿಗರಲ್ವಾ, ಜನರು ದಡ್ಡರಲ್ಲ, ಬá-ದ್ಧಿವಂತರಾಗಿದ್ದಾರೆ.

ಚೇತನ್​ಗೌಡ: ಸುಮಲತಾ ಪರ ಬೂತ್ ಏಜೆಂಟ್​ಗಳಿಲ್ಲ. ಜೆಡಿಎಸ್​ನವರು ಪ್ರತಿ ಊರಿನಲ್ಲೂ ಬ್ಯಾರಿಕೇಡ್ ಹಾಕಂಡು ಅವರು ಹಣ ಹಂಚದಂತೆ ಕಾಯುತ್ತಾರೆ.

ರಮೇಶ್: ದುಡ್ಡು ಹಂಚಲು ಹೆಂಗಯ್ಯ ಬಿಡ್ತಾರೆ. ಇನ್​ಕಮ್ ಟ್ಯಾಕ್ಸ್​ನವರು ಕಾಯ್ತಿದ್ದಾರೆ.

ಚೇತನ್​ಗೌಡ: ಆಗಲೇ ದುಡ್ಡು ಬಂದು ಸೇರ್ಕಂಡಿದೆ. ಸ್ಥಳೀಯರನ್ನು ಯಾರು ಕೇಳ್ತಾರೆ. ಅವರೇನು ಮನೆಯಿಂದ ಖರ್ಚು ಮಾಡ್ತಿಲ್ಲ. 9 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಅದರ ಲಾಭ ಪಡೆಯಲಿದ್ದಾರೆ. ಇದು ಒಳ್ಳೆಯದಲ್ಲ.

ರಮೇಶ್: ಅಂತೂ ಒಪ್ಪಿಕೊಂಡಲ್ಲಾ. ನಿಮ್ಮಪ್ಪನಿಗೆ ಮಾತು ಕಮ್ಮಿ ಮಾಡಲು ಹೇಳು.

ಚೇತನ್​ಗೌಡ: ದೇವೇಗೌಡರೆ ಹೇಳಿದ್ದಾರೆ ಮಾತಾಡಲು.

ನಂತರ ಸುಮಲತಾ ಬಗ್ಗೆ ಚರ್ಚೆ ನಡೆದು ಪಿ.ರಮೇಶ್ ಸುಮಲತಾರ ನಡೆ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರೆ, ಚೇತನ್ ಸುಮಲತಾರ ವಿರುದ್ಧ ಮಾತನಾಡುತ್ತಾರೆ. ಒಟ್ಟಾರೆಯಾಗಿ ಚುನಾವಣೆಯಲ್ಲಿ ಬೂತ್​ಗಳಿಗೆ ಹಣ ಹಂಚುವ ಬಗ್ಗೆ ಚರ್ಚೆ ನಡೆದಿದ್ದು, ಆಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅದು ನನ್ನ ಧ್ವನಿಯಲ್ಲ. ಮೊದಲ, 2ನೇ ಆಡಿಯೋಗಳ ನಡುವೆ ವ್ಯತ್ಯಾಸವಿದೆ. ನನಗೆ, ನಮ್ಮ ತಂದೆ ಹೆಸರಿಗೆ ಚ್ಯುತಿ ತರಲು ಮಾಡಿರುವ ಆಡಿಯೋ. ಇದು ಟೂರಿಂಗ್ ಟಾಕೀಸ್​ನ ಭಾಗ. ಪಕ್ಷೇತರ ಅಭ್ಯರ್ಥಿ ಕಡೆಯವರು ಯಾರೋ ಮಾಡಿರಬಹುದು.

| ಚೇತನ್​ಗೌಡ, ಎಲ್.ಆರ್.ಶಿವರಾಮೇಗೌಡರ ಪುತ್ರ

Leave a Reply

Your email address will not be published. Required fields are marked *