8 ಜೆಡಿಎಸ್​ ಶಾಸಕರಿಗೆ ನಿಗಮ ಮಂಡಳಿ ಸ್ಥಾನ: ಕೋನರಡ್ಡಿ ಸಿಎಂ ರಾಜಕೀಯ ಕಾರ್ಯದರ್ಶಿ

ಬೆಂಗಳೂರು: ಜೆಡಿಎಸ್​ ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ತನ್ನ ಪಾಲಿನ ನಿಗಮ ಮಂಡಳಿ ನೇಮಕಾತಿಯನ್ನು ಮಂಗಳವಾರ ಪೂರ್ಣಗೊಳಿಸಿದೆ. 8 ಮಂದಿ ಶಾಸಕರೂ ಸೇರಿ ಒಟ್ಟು 9 ಮಂದಿಯನ್ನು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ನೇಮಕಗೊಳಿಸಿ ಆದೇಶಿಸಿದ್ದಾರೆ.

ಇದರ ಜತೆಗೆ ಮಾಜಿ ಶಾಸಕ ಎನ್​.ಎಚ್​. ಕೋನರಡ್ಡಿ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಕೋನರಡ್ಡಿ ಅವರಿಗೆ ವಿಧಾನ ಪರಿಷತ್​ ಸ್ಥಾನ ನೀಡಬೇಕು ಎಂಬ ಬೇಡಿಕೆ ಇತ್ತು.

  • ನಾಗನಗೌಡ ಕಂದಕೂರ – ಕೊಳಗೇರಿ ಅಭಿವೃದ್ಧಿ ಮಂಡಳಿ
  • ರಾಜಾ ವೆಂಕಟಪ್ಪ ನಾಯಕ – ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  • ಡಿ.ಸಿ.ಗೌರಿಶಂಕರ್ – ಎಂಎಸ್​​ಐಎಲ್
  • ಬಿ.ಸತ್ಯನಾರಾಯಣ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
  • ನಿಸರ್ಗ ನಾರಾಯಣಸ್ವಾಮಿ – KAIL ಯೋಜನಾ ಪ್ರಾಧಿಕಾರ
  • ಅನ್ನದಾನಿ -ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  • ಕೆ.ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ
  • ಕೆ.ಮಹದೇವ್ – ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ
  • ಮೊಹಮ್ಮದ್ ಜಫ್ರುಲ್ಲಾಖಾನ್ – ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ