ಚೌಡಯ್ಯನವರ ಕೊಡುಗೆ ಅಪಾರ

ಬೀಳಗಿ:ನಿಜಶರಣ ಅಂಬಿಗರ ಚೌಡಯ್ಯನವರು ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಗುರುರಾಜ ಲೂತಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾಡಳಿತ ಸೋಮವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರ ತತ್ತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ. ಸಮುದಾಯದ ಜನರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು.

ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ರೂಪಾ ಹಿರೇಮಠ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಮಗಿಯಪ್ಪ ದೇವನಾಳ, ಗಂಗಾಮತಸ್ಥ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಬಾರಕೇರ, ಮಹಾಂತೇಶ ಕೋಲಕಾರ, ರಾಮಣ್ಣ ವಾಲಿಕಾರ, ಪರಸಪ್ಪ ವಾಲಿಕಾರ, ಸುರೇಶ ಹೊಸೂರ, ಲಕ್ಷ್ಮಣ ಢವಳೇಶ್ವರ, ತಹಸೀಲ್ದಾರ್ ಉದಯ ಕುಂಬಾರ, ಬಿಇಒ ಮಿರ್ಜಿ, ಜಿ.ಎಂ. ಮಾಟಲದಿನ್ನಿ ಇದ್ದರು.