ಜಯನಗರ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಜಯಭೇರಿ

ಬೆಂಗಳೂರು: ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಅದ್ಭುತ ಗೆಲುವು ಸಾಧಿಸಿದ್ದಾರೆ.

ಅಂಚೆ ಮತ ಎಣಿಕೆಯನ್ನು ಬಿಟ್ಟರೆ, ಒಟ್ಟು 16 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಿಂದಲೂ ಸೌಮ್ಯಾ ರೆಡ್ಡಿಯವರು ನಿರಂತರ ಮುನ್ನಡೆ ಕಾಯ್ದುಕೊಂಡು ಬರುತ್ತಿದ್ದರು. ಕೊನೆಯಲ್ಲಿ ಸೌಮ್ಯಾರೆಡ್ಡಿ ಅವರು 2886 ಮತಗಳ ಅಂತರದಿಂದ ಬಿಜೆಪಿಯ ಪ್ರಹ್ಲಾದ್ ಬಾಬು​ ಅವರ ವಿರುದ್ಧ ಜಯಗಳಿಸಿದ್ದಾರೆ.

# ಕಾಂಗ್ರೆಸ್ ಸೌಮ್ಯಾರೆಡ್ಡಿ (ಕಾಂಗ್ರೆಸ್​) – 54457
# ಬಿಜೆಪಿ ಅಭ್ಯರ್ಥಿ (ಬಿಜೆಪಿ) – 51568
# ರವಿಕೃಷ್ಣಾರೆಡ್ಡಿ (ಪಕ್ಷೇತರ)- 1861
# ನೋಟಾ -848
# ಅಂತರ – 2886

Leave a Reply

Your email address will not be published. Required fields are marked *