ನನ್ನನ್ನೇ ನೋಡಿ ಕಲಿತಿದ್ದಾಳೆ ಮಗಳು: ರಾಮಲಿಂಗಾ ರೆಡ್ಡಿ

ಬೆಂಗಳೂರು: ಜಯನಗರದಲ್ಲಿ ಗೆಲ್ಲಲೇ ಬೇಕು ಎಂಬ ಜವಾಬ್ದಾರಿ ಇತ್ತು. ಹಾಗೇ ಅನಿವಾರ್ಯತೆಯೂ ಇತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮಾಧ್ಯಮದವರ ಜತೆ ಮಾತನಾಡಿ, ನನ್ನ ಮಗಳು ನನ್ನನ್ನು ನೋಡಿ ಕಲಿತಿದ್ದಾಳೆ. ಎಷ್ಟೇ ಮತದಲ್ಲಿ ಗೆದ್ದರೂ ಗೆಲುವೇ. ಅವಳಲ್ಲಿ ಜನರಿಗೆ ಸಹಾಯ ಮಾಡಬೇಕು ಎಂಬ ಹಂಬಲವಿದೆ. ಈಗ ಶಾಸಕಿಯಾಗಿದ್ದು ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾಳೆ ಎಂದು ತಿಳಿಸಿದರು.

ನಾನು ನಾಲ್ಕು ಬಾರಿ ಸಚಿವನಾಗಿದ್ದೆ. ಈಗ ಸಚಿವರನ್ನಾಗಿ ಮಾಡಿ ಎಂದು ಕೇಳೋದಿಲ್ಲ. ಅನೇಕರಿಗೆ ಇದು ಕೈತಪ್ಪಿದೆ. ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗಿ ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಳ್ಳುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *