More

  ಜಯದೇವ ಮೇಲ್ಸೇತುವೆ ತೆರವು ಆರಂಭ; ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಹಿನ್ನೆಲೆ, 3 ತಿಂಗಳಲ್ಲಿ ಮುಕ್ತಾಯ

  ಬೆಂಗಳೂರು:  ಮೆಟ್ರೊ ಇಂಟರ್​ಚೇಂಜ್ ನಿಲ್ದಾಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಜಯದೇವ ಮೇಲ್ಸೇತುವೆಯ ಇಳಿದಾರಿ ತೆರವು ಕಾಮಗಾರಿಯನ್ನು ಸೋಮವಾರದಿಂದ ಆರಂಭಿಸಲಾಗಿದೆ.

  ಮೆಟ್ರೋ 2 ನೇ ಹಂತದ ಯೋಜನೆಯಲ್ಲಿ ಆರ್.ವಿ.ರಸ್ತೆ- ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗಗಳ ಇಂಟರ್​ಚೇಂಜ್ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ನಿರ್ವಣವಾಗಲಿದೆ. ಅದಕ್ಕಾಗಿ ಜಯದೇವ ಆಸ್ಪತ್ರೆ ಎದುರಿನ ಮೇಲ್ಸೇತುವೆಯನ್ನು ಕೆಡವಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಎರಡು ಹಂತದಲ್ಲಿ ಮೇಲ್ಸೇತುವೆ ತೆರವು ಕಾಮಗಾರಿ ನಡೆಸಲಾಗಿದ್ದು, ಮೊದಲಿಗೆ ಮೇಲ್ಸೇತುವೆಯ ಒಂದು ಭಾಗವಾದ 150 ಮೀಟರ್ ಉದ್ದದ ಮಾರ್ಗ ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಉಳಿದ ಮೇಲ್ಸೇತುವೆ ಭಾಗವನ್ನು ತೆರವು ಮಾಡಲು ಸೋಮವಾರ ಸಂಜೆಯಿಂದ ಕಾಮಗಾರಿ ಆರಂಭಿಸಲಾಗಿದೆ. 3 ತಿಂಗಳವರೆಗೆ ಕಾಮಗಾರಿ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೂಲಕ ತೆರಳುವ ವಾಹನಗಳಿಗೆ ಬದಲಿ ಮಾರ್ಗವನ್ನು ನಿಗದಿ ಮಾಡಲಾಗಿದೆ.

  ಸಂಚಾರ ಮಾರ್ಗ ಬದಲು

  ಹೊರವರ್ತಲ ರಸ್ತೆಯಲ್ಲಿನ 18ನೇ ಮುಖ್ಯರಸ್ತೆಯ ಮಾರೇನಹಳ್ಳಿಯಿಂದ 29ನೇ ಮುಖ್ಯರಸ್ತೆಯ ಬಿಟಿಎಂ 2ನೇ ಹಂತದ ರಸ್ತೆಯ ಎರಡೂ ಬದಿಯಲ್ಲಿ ಪ್ರತಿದಿನ ರಾತ್ರಿ 10.30ರಿಂದ ಬೆಳಗ್ಗೆ 5.30ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮಾರೇನಹಳ್ಳಿಯ 36ನೇ ಅಡ್ಡರಸ್ತೆ, 28ನೇ ಮುಖ್ಯರಸ್ತೆ, ಈಸ್ಟ್ ಎಂಡ್ ರಸ್ತೆ, ಬಿಟಿಎಂ ಲೇಔಟ್ 2ನೇ ಹಂತದ 29, 16 ಮತ್ತು 7ನೇ ಮುಖ್ಯರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

  ಸುರಂಗಕ್ಕೆ ಭೂಸ್ವಾಧೀನ ತೊಡಕು

  ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದಲ್ಲಿನ ಏಕೈಕ ಸುರಂಗ ಮಾರ್ಗಕ್ಕೆ ಭೂಸ್ವಾಧೀನ ಸಮಸ್ಯೆ ಎದುರಾಗಿದ್ದು, ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುವಂತಾಗಿದೆ. ಗೊಟ್ಟಿಗೆರೆಯಿಂದ ನಾಗ ಸಂದ್ರವರೆಗೆ ಸುರಂಗ ಮಾರ್ಗ ನಿರ್ವಿುಸಲಾಗುತ್ತಿದೆ. ಅದಕ್ಕೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ವೆಲ್ಲಾರ ಜಂಕ್ಷನ್​ನಿಂದ ಮಾರ್ಚ್​ನಲ್ಲಿ ಸುರಂಗ ಕೊರೆಯುವ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಅದರ ಜತೆಗೆ ಉಳಿದೆಡೆ ಕಾಮಗಾರಿ ಆರಂಭಿಸಲು ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಅದರಂತೆ ನಾಲ್ಕು ಕಡೆ ಭೂಮಿ ಪಡೆಯುವಲ್ಲಿ ಬಿಎಂಆರ್​ಸಿಎಲ್ ಪರದಾಡುತ್ತಿದ್ದು, ಅದರಿಂದ ಯೋಜನೆ ಮೇಲೆ ಪರಿಣಾಮ ಬೀರುವಂತಾಗಿದೆ.

  ಲ್ಯಾಂಗ್​ಫೋರ್ಡ್ ರಸ್ತೆಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ 8 ಸಾವಿರ ಚದರ ಮೀ. ಭೂಮಿಯ ಅವಶ್ಯಕತೆಯಿದೆ. ಅದರಲ್ಲಿ 2,137 ಚ.ಮೀ. ಶಾಶ್ವತವಾಗಿ ಮತ್ತು 5,866 ಚ.ಮೀ. ತಾತ್ಕಾಲಿಕವಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಆ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಈವರೆಗೆ ಬಿಎಂಆರ್​ಸಿಎಲ್​ಗೆ ಸಾಧ್ಯವಾಗಿಲ್ಲ. ಅದರ ಜತೆಗೆ ದಂಡು ರೈಲು ನಿಲ್ದಾಣ ಬಳಿ ನೆಲದಡಿ ಮೆಟ್ರೋ ನಿಲ್ದಾಣ ನಿರ್ವಣಕ್ಕೆ ಬೇಕಿರುವ ಜಾಗದ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಟ್ಯಾನರಿ ರಸ್ತೆ- ಪಾಟರಿ ಟೌನ್ ಸುರಂಗ ಮಾರ್ಗ ನಿರ್ವಣಕ್ಕೆ ಈದ್ಗಾ ಮೈದಾನದ ಜಾಗ ಮತ್ತು ಲಕ್ಕಸಂದ್ರದಲ್ಲಿ ಕೊಳೆಗೇರಿಯಿಂದ ಒತ್ತುವರಿಯಾಗಿರುವ ಜಾಗ ತೆರವು ಮಾಡಲು ಸಾಧ್ಯ ವಾಗುತ್ತಿಲ್ಲ. ಈ ಎಲ್ಲದರಿಂದಾಗಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ವಿಳಂಬವಾಗುವಂತಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts