ಜವಾರಿ ಕೋಳಿ ತಿಂದು ನರಸಿಂಹಸ್ವಾಮಿ ದರ್ಶನ ಪಡೆದ ರಾಹುಲ್​ಗೆ ಟ್ವೀಟ್ ಬಾಣ ಬಿಟ್ಟ ಬಿಎಸ್​ವೈ

<< ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್​ನಿಂದ ಧಕ್ಕೆ >>

ಬೆಂಗಳೂರು: ಬಿಜೆಪಿ-ಕಾಂಗ್ರೆಸ್​ ಟ್ವಿಟರ್​ ಸಮರ ಮುಂದುವರಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಟ್ವೀಟ್​ ಸರಣಿಯಲ್ಲಿ ಮತ್ತೆ ವಾಗ್ಬಾಣ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಗುರಿಯಾಗಿಸಿಕೊಂಡು ಟ್ವೀಟ್​ ಬಾಣ ಬಿಟ್ಟಿದ್ದಾರೆ. ರಾಹುಲ್ ಗಾಂಧಿ ಟೆಂಪಲ್ ರನ್ ಕ್ರಮ ಖಂಡಿಸಿದ್ದಾರೆ.

ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ ಸಿಎಂ ಸಿದ್ದರಾಮಯ್ಯ ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ರಾಹುಲ್​ ಗಾಂಧಿ ಮತ್ತೊಂದು ಕಡೆ. ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ ಎಂದು ಜರಿದಿದ್ದಾರೆ.

Leave a Reply

Your email address will not be published. Required fields are marked *