ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಅಸ್ಸಾಂ ರೈಫಲ್ಸ್ ಸೈನಿಕ: ಓರ್ವ ಯೋಧ ಹುತಾತ್ಮ

ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅರೆ ಸೇನಾಪಡೆಯ ಆಸ್ಸಾಂ ರೈಫಲ್ಸ್​ನ ಸೈನಿಕ ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಆರೋಪಿಯನ್ನು ಸೈನಿಕ ಲಕ್ಷ್ಮೀಕಾಂತ್​ ಭರ್ಮನ್​ ಎಂದು ಗುರುತಿಸಲಾಗಿದೆ. ಭೋಲಾನಾಥ್​ ದಾಸ್​ ಮೃತ ಯೋಧ ಹಾಗೂ ಅನಿಲ್ ರಾಜ್​ಬಂಶಿ ಹಾಗೂ ರಂತು ಮಣಿ ಎಂಬುವರು ಗಾಯಗೊಂಡವರು.

ಮೇ 6ರಂದು ಹೌರಾದಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾಗ್ನಾನ್​ನಲ್ಲಿದ್ದ ಅರೆಸೇನಾ ಪಡೆಯ ಶಿಬಿರದ ಮೇಲೆ ಲಕ್ಷ್ಮೀಕಾಂತ್​ ಭರ್ಮನ್ 18 ಸುತ್ತು ಗುಂಡು ಹಾರಿಸಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ.