Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

Photos: ಜಾವಾ ಬ್ಯಾಕ್​ ; ಮೂರು ಮಾದರಿ ಬೈಕ್​ಗಳ ಬಿಡುಗಡೆ

Thursday, 15.11.2018, 5:00 PM       No Comments

ಮುಂಬೈ: ದಶಕಗಳ ಹಿಂದೆ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕ್​ ನವೀನ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಭಾರತಕ್ಕೆ ಆಗಮಿಸಿದ್ದು, ಮಹಿಂದ್ರಾ ಕಂಪನಿ ಗುರುವಾರ ಜಾವಾ ಬೈಕ್​ನ ಮೂರು ವೇರಿಯಂಟ್​ಗಳನ್ನು ಬಿಡುಗಡೆ ಮಾಡಿತು.

ಜಾವಾ ಮೋಟರ್​ಸೈಕಲ್ಸ್​ ಕಂಪನಿ ಜಾವಾ, ಜಾವಾ 42 ಮತ್ತು ಜಾವಾ ಪೆರಿಕ್​ ಎಂಬ ಮೂರು ವೇರಿಯಂಟ್​ಗಳನ್ನು ಅನಾವರಣಗೊಳಿಸಿತು. ಜಾವಾ ಮತ್ತು ಜಾವಾ 42 ಬೈಕ್​ಗಳು ಬಿಎಸ್​6 ಮಾನದಂಡ ಹೊಂದಿರುವ 293 ಸಿಸಿ ಸಿಂಗಲ್​ ಸಿಲಿಂಡರ್​ ಇಂಜಿನ್​ ಹೊಂದಿದ್ದರೆ, ಜಾವಾ ಪೆರಿಕ್​ 334 ಸಿಸಿ ಸಿಂಗಲ್​ ಸಿಲಿಂಡರ್​ ಇಂಜಿನ್​ ಹೊಂದಿದೆ. ಹೊಸ ಮಾದರಿಯ ಈ ಎಂಜಿನ್​ ಲಿಕ್ವಿಡ್​ ಕೂಲ್ಡ್ ಆಗಿದ್ದು, 27 ಬಿಎಚ್​ಪಿ ಮತ್ತು 28 ಎನ್​ಎಂ ಗರಿಷ್ಠ ಟಾರ್ಕ್​ ಹೊಂದಿದೆ. ಈ ಎಂಜಿನ್​ಗೆ 6 ಸ್ಪೀಡ್​ ಗಿಯರ್​ ಬಾಕ್ಸ್​ ಇದೆ. ಜಾವಾ ಮತ್ತು ಜಾವಾ 42 ಬೈಕ್​ಗಳು ಇಂದು ಬಿಡುಗಡೆಗೊಂಡಿದ್ದು, ಜಾವಾ ಪೆರಿಕ್​ ಬೈಕ್​ 2019ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಜಾವಾ ಬೈಕ್​ ಕಪ್ಪು, ಮರೂನ್​ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿದ್ದರೆ, ಜಾವಾ 42 ವೈಕ್​ ಹಾಲೇಸ್​ ಟೇಲ್​, ಗ್ಯಾಲಕ್ಟಿರ್​ ಗ್ರೀನ್​, ಸ್ಟರ್​ಲೈಟ್​ ಬ್ಲ್ಯೂ, ಲ್ಯೂಮಸ್​ ಲೈಮ್​, ನೆಬ್ಯುಲಾ ಬ್ಲ್ಯೂ ಮತ್ತು ಕಾಮೆಟ್​ ರೆಡ್​ ಬಣ್ಣದಲ್ಲಿ ಲಭ್ಯವಿದೆ. ಜಾವಾ 42ರ ಬೆಲೆ 1.55 ಲಕ್ಷ ರೂ. (ದೆಹಲಿಯಲ್ಲಿ ಎಕ್ಸ್​ ಶೋರೂ. ಬೆಲೆ) ಇದ್ದರೆ, ಜಾವಾ ಬೈಕ್​ ಬೆಲೆ 1.64 ಲಕ್ಷ ರೂ. (ದೆಹಲಿಯಲ್ಲಿ ಎಕ್ಸ್​ ಶೋರೂ. ಬೆಲೆ) ಇದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜಾವಾ ಬೈಕ್​ಗಳು ಪಿಥಮ್​ಪುರ್​ನಲ್ಲಿರುವ ಮಹೀಂದ್ರಾದ ಘಟಕದಲ್ಲಿ ತಯಾರಾಗಲಿದ್ದು, 2019ರ ಫೆಬ್ರವರಿಯಲ್ಲಿ ಬೈಕ್​ ಟೆಸ್ಟ್​ ರೈಡ್​ ಗೆ ಲಭ್ಯವಾಗಲಿದೆ. ಫೆಬ್ರವರಿಯ ನಂತರ ಬೈಕ್​ ಗ್ರಾಹಕರಿಗೆ ಲಭ್ಯವಾಗಲಿದೆ.

ಬಹುನಿರೀಕ್ಷಿತ ಜಾವಾ ಬೈಕ್​ನ ಗತ ವೈಭವ ತಿಳಿಸಲು ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಮೊರೆ ಹೋದ ಮಹೀಂದ್ರ

Leave a Reply

Your email address will not be published. Required fields are marked *

Back To Top