ಬಹುನಿರೀಕ್ಷಿತ ಜಾವಾ ಬೈಕ್​ನ ಗತ ವೈಭವ ತಿಳಿಸಲು ನಾ ನಿನ್ನ ಮರೆಯಲಾರೆ ಚಿತ್ರಕ್ಕೆ ಮೊರೆ ಹೋದ ಮಹೀಂದ್ರ

ಬೆಂಗಳೂರು: ಪಡ್ಡೆ ಹುಡುಗರು ಆಸೆಗಣ್ಣಿನಿಂದ ಎದುರು ನೋಡುತ್ತಿರುವ ಜಾವಾ ಬೈಕ್​ ಇದೇ 15ರಂದು ಹೊಸ ಅವತಾರದೊಂದಿಗೆ ಅನಾವರಣಗೊಳ್ಳುತ್ತಿದೆ. ಇನ್ನೇನು ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಸಿದ್ಧವಾಗಿರುವ ನೂತನ ಜಾವಾ ಬೈಕ್​ನ ಪ್ರಚಾರದಲ್ಲಿ ನಿರತವಾಗಿರುವ ಮಹೀಂದ್ರಾ ಸಂಸ್ಥೆ, ಡಾ.ರಾಜ್​ಕುಮಾರ್​ ಅವರ ‘ನಾ ನಿನ್ನ ಮರೆಯಲಾರೆ’ ಚಿತ್ರದ ಸಾಹಸ ದೃಶ್ಯದೊಂದಿಗೆ ಬೈಕ್​ನ ವೈಭವವನ್ನು ನೆನಪಿಸುವ ಕೆಲಸ ಮಾಡಿದೆ.

While we await the epic homecoming of the Jawa on 15.11.18, here's something to set your heart racing. Have fun watching this legendary scene from the film 'Naa Ninna Mareyalare'. #jawamotorcycles #justjawa #jawaisback #jawawood #classicmovies #jawa #motorcycles

Jawa Motorcycles ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ನವೆಂಬರ್ 11, 2018

‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ರಾಜ್​ಕುಮಾರ್​ ಅವರು ಬಳಸಿರುವುದು ಜಾವಾ ಬೈಕ್​ ಅನ್ನೇ. ಅಲ್ಲದೆ, ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ರಾಜ್​ ತಮ್ಮ ಜಾವಾ ಬೈಕ್​ ಮೂಲಕ ರೈಲು ಬೆನ್ನು ಹತ್ತುತ್ತಾರೆ. ಬೆಟ್ಟಗುಡ್ಡಗಳು, ಕಾರು ಲಾರಿಗಳ ಮೇಲೆ ರಾಜ್​ಕುಮಾರ್​ ಅವರು ಬೈಕ್​ ಅನ್ನು ಚಲಾಯಿಸುತ್ತಾರೆ. ಈ ದೃಶ್ಯ ಸಾಹಸಮಯವಾಗಿ ಕೂಡಿದ್ದು, ಆ ದೃಶ್ಯ ಎಂಥವರನ್ನೂ ಹಿಡಿದಿಟ್ಟುಕೊಳ್ಳುವಷ್ಟು ರೋಚಕವಾಗಿದೆ. ಹೀಗಾಗಿ ಮಹೀಂದ್ರ ಸಂಸ್ಥೆ ತನ್ನ ನೂತನ ಬೈಕ್​ನ ಪ್ರಚಾರಕ್ಕಾಗಿ ಮತ್ತು ಅದರ ಗತ ವೈಭವವನ್ನು ಸಾರುವ ಸಲುವಾಗಿ ರಾಜ್​ ಕುಮಾರ್​ ಅವರ ಚಿತ್ರದ ದೃಶ್ಯ ತುಣುಕನ್ನು ಬಳಸಿಕೊಂಡಿದೆ.

ಜಾವಾ ಮೋಟರ್​ ಸೈಕಲ್​ ಎಂಬ ಹೆಸರಿನ ಟ್ವಿಟರ್​, ಫೇಸ್​ಬುಕ್​ ಮತ್ತು ಯ್ಯೂಟ್ಯೂಬ್​ ಚಾನೆಲ್​ಗಳಲ್ಲಿ ಈ ದೃಶ್ಯಗಳನ್ನು ಹಂಚಿಕೊಳ್ಳಲಾಗಿದ್ದು, ಬೈಕ್​ ಪ್ರಿಯರಿಂದ ಭಾರಿ ಸ್ಪಂದನೆಯೂ ವ್ಯಕ್ತವಾಗಿದೆ.

ತಿಂಗಳ ಹಿಂದೆ ಜಾವಾದ ಎಂಜಿನ್​ನ ಮಾದರಿಯನ್ನು ಮಹೀಂದ್ರಾ ಸಂಸ್ಥೆ ಬಿಡುಗಡೆ ಮಾಡಿತ್ತು. ಈ ಹಿಂದಿನ ಬೈಕ್​ನ ಎಂಜಿನ್​ ಮಾದರಿಯಲ್ಲೇ ನೂತನ ಬೈಕ್​ನ ಎಂಜಿನ್​ ಅನ್ನೂ ಕೂಡ ವಿನ್ಯಾಸ ಮಾಡಿದ್ದರಿಂದ, ಹೊಸ ಬೈಕ್​ ಬಗ್ಗೆ ಯುವ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಈ ನಡುವೆ ನೂತನ ಜಾವಾದ ಪರೀಕ್ಷಾರ್ಥ ಬೈಕ್​ಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಆದರೂ, ಇದೇ 15ರಂದು ಬೈಕ್​ನ ಮೂರು ಅವತರಣಿಕೆಗಳು ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಬೈಕ್​ನ ಕುರಿತ ಕುತೂಹಲ ಇನ್ನೂ ಹಾಗೇ ಉಳಿದುಕೊಂಡಿದೆ.