ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

ಚನ್ನಮ್ಮ ಕಿತ್ತೂರು: ಪಟ್ಟಣದ ಗ್ರಾಮದೇವತೆಯ ಜಾತ್ರೆಯನ್ನು 2020ರಲ್ಲಿ ಅದ್ದೂರಿಯಾಗಿ ನಡೆಸಲು ಗೋಕಾಕದ ತುಕ್ಕಾನಟ್ಟಿಯ ಶಾಂತಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಯಿತು.

ಪಟ್ಟಣದ ಕೋಟೆ ಆವರಣದಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಯುಗಾದಿ ಹಾಗೂ ಬಸವ ಜಯಂತಿಯ ಆಚರಣೆಯ ದಿನಗಳ ಮದ್ಯೆ ಗ್ರಾಮದೇವಿ ಜಾತ್ರೆ ನಡೆಸಲು ಸೂಕ್ತ ಸಮಯವೆಂದು ಸ್ವಾಮೀಜಿ ಹಿರಿಯರ ಸಮ್ಮುಖದಲ್ಲಿ ನಿರ್ಧಿಸಿದರು.

11ದಿನ ಜಾತ್ರೆ ನಡೆಯಲಿದ್ದು, ಕಿತ್ತೂರು ಸೇರಿ ಬಸ್ಸಾಪುರ, ಮಲ್ಲಾಪುರ, ನಿಚ್ಚಣಕಿ, ತಿಮ್ಮಾಪುರ, ಗಿರಿಯಾಲ ಚನ್ನಾಪುರ ಸೇರಿ ಒಟ್ಟು 7 ಹಳ್ಳಿಗಳ ಭಕ್ತರು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಜಾತ್ರೆಗೆ ಸುಮಾರು 1.5 ಕೋಟಿ ರೂ. ವೆಚ್ಚ ತಗುಲಲಿದೆ. ಜಾತ್ರೆಗೆ ನೂತನ ರಥ ಸಿದ್ದಗೊಳಿಸಲಾಗುವುದೆಂದು ತಿಳಿಸಿದ ನಂತರ ಪ್ರಮುಖರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ಥಳದಲ್ಲಿಯೇ 15 ಲಕ್ಷಕ್ಕೂ ಹೆಚ್ಚಿ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಸಮಿತಿ ಸದಸ್ಯ ಗುರುಸಿದ್ದಯ್ಯ ಕಲ್ಮಠ, ಗ್ರಾಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಈರಣ್ಣ ಮಾರಿಹಾಳ, ಡಾ.ಬಸವೇಶ್ವರ ತೊರಗಲ್ಮಠ, ಶ್ರೀಶೈಲ ತೇಗೂರ, ಸಕ್ಕರಗೌಡ ಪಾಟೀಲ, ಅಜ್ಜಪ್ಪ ಪತ್ತಾರ, ಯಲ್ಲಪ್ಪ ವಕ್ಕುಂದ ಇತರರು ಇದ್ದರು.