ಜಸ್ಪ್ರೀತ್​ ಬುಮ್ರಾ​ ಬೌಲಿಂಗ್​ ಶೈಲಿ ಅನುಕರಣೆ ಮಾಡಿದ ಆಸ್ಟ್ರೇಲಿಯಾ ಬಾಲಕ: ವಿಡಿಯೋ ವೈರಲ್​

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್​ ಪಂದ್ಯಾವಳಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಅಲ್ಲಿ ಆಟವಾಡಿದ ಜಸ್ಪ್ರೀತ್​ ಬುಬ್ರಾ ಬೌಲಿಂಗ್ ಸ್ಟೈಲ್​ನ್ನು ಈಗ ಆಸ್ಟ್ರೇಲಿಯಾ ಬಾಲಕನೋರ್ವ ಅನುಕರಣೆ​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕ್ರಿಕೆಟ್​ ಅಭಿಮಾನಿಗಳ ಮನಸು ಗೆದ್ದಿದೆ. ಅಲ್ಲದೆ ಆ ಬಾಲಕ ತಮ್ಮಂತೆ ಬೌಲಿಂಗ್​ ಮಾಡುವುದನ್ನು ನೋಡಿ ಬುಮ್ರಾ ಕ್ಲೀನ್​ ಬೌಲ್ಡ್​ ಆಗಿದ್ದಾರೆ.

ಬುಮ್ರಾ ಬೌಲ್​ ಮಾಡುವ ಶೈಲಿ ತೀರ ಸಾಂಪ್ರದಾಯಿಕವಾಗಿಯೇನೂ ಇಲ್ಲ. ಜಸ್ಪ್ರಿತ್​ ಅವರ ಕ್ರಮಬದ್ಧವಲ್ಲದ ವಿಭಿನ್ನ ಶೈಲಿಯನ್ನು ನೋಡಿದ್ದ ಕಪಿಲ್ ದೇವ್​, ಹೀಗೆ ಬೌಲಿಂಗ್​ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ನಲ್ಲಿ ದೀರ್ಘಕಾಲ ಉಳಿಯುವುದು ಕಷ್ಟ ಎಂದು ಯೋಚಿಸಿದ್ದರಂತೆ. ಅದನ್ನು ಅವರೇ ಹೇಳಿಕೊಂಡಿದ್ದರು. ಅಲ್ಲದೆ ಬುಮ್ರಾ ಆಸ್ಟ್ರೇಲಿಯಾದಲ್ಲಿ ತೋರಿದ ಸಾಧನೆಯನ್ನು ನೋಡಿದ ಬಳಿಕ, ನನ್ನ ಆಲೋಚನೆಯನ್ನು ಬುಮ್ರಾ ಸುಳ್ಳಾಗಿಸಿದ್ದಾರೆ ಎಂದು ತಿಳಿಸಿದ್ದರು.

ಈಗ ಆಸ್ಟ್ರೇಲಿಯಾದ ಪುಟ್ಟ ಬಾಲಕನೋರ್ವ ಬುಮ್ರಾ ಅವರ ವಿಭಿನ್ನ ಬೌಲಿಂಗ್​ ಶೈಲಿಯನ್ನು ಅನುಕರಣೆ ಮಾಡಿದ್ದಾನೆ. ನೆಟ್​ನಲ್ಲಿ ಕ್ರಿಕೆಟ್​ ಅಭ್ಯಾಸ ಮಾಡುತ್ತಿದ್ದ ಈತ ಬುಮ್ರಾ ಅವರಂತೆ ಓಡಿ ಬಂದು ಬೌಲಿಂಗ್​ ಮಾಡಿದ್ದಾನೆ. ಈ ವಿಡಿಯೋ ವೈರಲ್​ ಆಗಿದೆ.

ವಿಡಿಯೋ ನೋಡಿದ ಬುಮ್ರಾ ಟ್ವೀಟ್​ ಮಾಡಿದ್ದು, ಈ ಬಾಲಕ ತುಂಬ ಮುದ್ದಾಗಿದ್ದಾನೆ. ಅವನಿಗೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ.

ಐಸಿಸಿ ಕೂಡ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದೆ. 2034ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಾವಳಿ ವೀಕ್ಷಿಸಲು ತುಂಬ ಕುತೂಹಲಕಾರಿಯಾಗಿರುತ್ತದೆ. ಆಸ್ಸೀ ಮುಂದಿನ ಜನರೇಶನ್​ ಈಗಿನಿಂದಲೇ ಅಭ್ಯಾಸ ನಡೆಸುತ್ತಿದೆ ಎಂದು ಬರೆದುಕೊಂಡಿದೆ.

Leave a Reply

Your email address will not be published. Required fields are marked *