ಜಪರಸಾಯನ

‘ತಜ್ಜಪಸ್ತದರ್ಥಭಾವನಮ್ ಎಂಬ ಪತಂಜಲಿ ಮಹರ್ಷಿಗಳ ಯೋಗ ಸೂತ್ರದ ಪ್ರಕಾರ ಗುರು ಮುಖೇನ ಪ್ರಾಪ್ತವಾದ ಇಷ್ಟ ಮಂತ್ರದ ಅರ್ಥವನ್ನು ಮನಸ್ಸಿನಲ್ಲಿ ಚಿಂತಿಸುತ್ತ ಮಂತ್ರಾಕ್ಷರಗಳ ಆವೃತ್ತಿಯನ್ನು ಶ್ರದ್ಧೆಯಿಂದ ಮಾಡುವುದೇ ಜಪವು. ಇದಕ್ಕೆ ಜಪಯಜ್ಞ ಎಂತಲೂ ಕರೆಯುವರು. ಶ್ರೀ ‘ಸಿದ್ಧಾಂತ ಶಿಖಾಮಣಿ’ಯಲ್ಲಿ ಓಂಕಾರದ ಆವೃತ್ತಿ, ಓಂಕಾರ ಸಹಿತ ಪಂಚಾಕ್ಷರದ ಆವೃತ್ತಿ ಮತ್ತು ಶ್ರೀ ರುದ್ರದ ಆವೃತ್ತಿಗೆ ಜಪಯಜ್ಞವೆಂದು ಕರೆದಿದ್ದಾರೆ. ಸಾಮಾನ್ಯವಾಗಿ ಮಂತ್ರಶಾಸ್ತ್ರದಲ್ಲಿ ಮಂತ್ರಗಳನ್ನು ಬೀಜಮಂತ್ರ, ಕರ್ತರಿ ಮಂತ್ರ ಮತ್ತು ಮಾಲಾಮಂತ್ರ ಗಳೆಂಬುದಾಗಿ ಮೂರು ವಿಧವಾಗಿ ವಿಂಗಡಿಸಿದ್ದಾರೆ.

10 ಅಕ್ಷರಗಳವರೆಗಿನ ಮಂತ್ರಗಳಿಗೆ ಬೀಜ ಮಂತ್ರ ವೆಂದು, 10 ಅಕ್ಷರಗಳ ಮೇಲ್ಪಟ್ಟು 20 ಅಕ್ಷರಗಳವರೆಗಿನ ಮಂತ್ರಗಳಿಗೆ ಕರ್ತರಿ ಮಂತ್ರವೆಂದು, ಇನ್ನು 20 ಅಕ್ಷರಗಳಿಗಿಂತಲೂ ಹೆಚ್ಚು ಅಕ್ಷರಗಳುಳ್ಳ ಮಂತ್ರಗಳಿಗೆ ಮಾಲಾಮಂತ್ರಗಳೆಂದು ಕರೆಯುವರು. ಈ ಮಾಲಾ ಮಂತ್ರಗಳಲ್ಲಿ ಶ್ರೀ ಸಿದ್ಧಾಂತ ಸಿಖಾಮಣಿ, ಶ್ರೀಮದ್ ಭಗವದ್ಗೀತೆ, ಶ್ರೀಮದ್ ಭಾಗವತ ಮುಂತಾದ ಪಾರಾಯಣ ಗ್ರಂಥಗಳ ಪರಿಗಣನೆಯಾಗುತ್ತದೆ. ಕಾರಣ ಬೀಜ ಮಂತ್ರಗಳ ಜಪವಾಗಲಿ, ಕರ್ತರಿ ಮಂತ್ರಗಳ ಜಪವಾಗಲಿ, ಅಥವಾ ಪಾರಾಯಣ ಗ್ರಂಥಗಳೆಂದು ಕರೆಯಲ್ಪಡುವ ಮಾಲಾ ಮಂತ್ರಗಳ ಜಪವಾಗಲಿ ಇವೆಲ್ಲ ಒಂದು ದಿವ್ಯ ರಸಾಯನವೆಂಬುದಾಗಿ ಚರಕ ಮಹರ್ಷಿಗಳು ಉಪದೇಶಿಸಿದ್ದಾರೆ.

ನಮ್ಮ ಮನಸ್ಸಿಗೆ ಅಂಟಿಕೊಂಡ ಆದಿ ಮತ್ತು ದೇಹಕ್ಕೆ ಅಂಟಿ ಕೊಂಡಿರುವ ವ್ಯಾಧಿಗಳ ನಿವಾರಣೆಯು ಈ ಜಪ ರಸಾಯನ ದಿಂದಲೂ ಸಾಧ್ಯವೆಂಬ ವಿಚಾರವನ್ನು ಮಹರ್ಷಿಗಳು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಅಂದು ಮಹರ್ಷಿಗಳು ಹೇಳಿದ ಈ ಮಾತು ಸರ್ವಥಾ ಸತ್ಯವೆಂಬ ವಿಚಾರವನ್ನು ಇಂದು ವಿಜ್ಞಾನವೂ ಸಹ ತಿಳಿಸಿಕೊಡುತ್ತದೆ. ‘ಫಿಸಿಕ್ಸ್ ಆಂಡ್ ಕೆಮೆಸ್ಟ್ರಿ ಆಫ್ ಹ್ಯೂಮನ್ ಬಾಡಿ’ ಎಂಬ ವೈಜ್ಞಾನಿಕ ಗ್ರಂಥದಲ್ಲಿ ಈ ವಿಚಾರವನ್ನು ಸ್ಪಷ್ಟ ಪಡಿಸಲಾಗಿದೆ ಎಂಬುದನ್ನು ಸುಧಾ ಮೂರ್ತಿಯವರು ಅನೇಕ ಕಡೆ ಹೇಳಿದ್ದನ್ನು ಎಲ್ಲರೂ ಕೇಳಿರಬಹುದು. ಆ ಗ್ರಂಥ ಹೇಳುವುದೇನು? ಎರಡನೇ ಭಾಗದಲ್ಲಿ ನೋಡೋಣ.

ಇರೋದು 4 ಜನ, 4 ಬಲ್ಬ್​, 4 ಫ್ಯಾನ್​… 20 ಲಕ್ಷ ರೂ. ಕರೆಂಟ್ ಬಿಲ್​ ಪಡೆದ ಕುಟುಂಬ ಕಂಗಾಲು

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…