ಕ್ಯಾಮರಾಗೆ ಪೋಸ್​ ಕೊಟ್ಟು ಸಿನಿರಸಿಕರ ಹೃದಯಕ್ಕೆ ಲಗ್ಗೆಯಿಟ್ಟ ಜಾನ್ಹವಿ ಕಪೂರ್​!

ಮುಂಬೈ: ಅನೇಕ ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲರ ಹಾಟ್​ ಫೇವರಿಟ್​ ಆಗಿ ಮೆರೆದಿದ್ದ​ ನಟಿ ಶ್ರೀದೇವಿ ಸಾವಿನ ನಂತರ ಅವರ ಸ್ಥಾನವನ್ನು ಮಗಳಾದ ಜಾನ್ಹವಿ ಕಪೂರ್ ಅವರು ತುಂಬಿದ್ದಾರೆ.​

ಅಮ್ಮನ ಹಾದಿಯಲ್ಲಿ ಸಾಗುತ್ತಿರುವ ಜಾನ್ಹವಿ ಕಪೂರ್ ಮೊದಲ ಚಿತ್ರದಲ್ಲೇ ಭರವಸೆಯ ನಟಿ ಎಂಬ ಕೀರ್ತಿಗೆ ಭಾಜನರಾಗಿದ್ದಾಳೆ. ತಾನು ನಟಿಸಿದ ‘ಧಡಕ್​’ ಚಿತ್ರ ಮರಾಠಿಯ ‘ಸೈರಾಟ್​’ ಚಿತ್ರದ ರೀಮೇಕ್​ ಆದರೂ ಮೊದಲ ಚಿತ್ರದಲ್ಲೇ ಅಮೋಘ ಅಭಿನಯದಿಂದ ಸಿನಿ ರಸಿಕರ ಮನ ಗೆದಿದ್ದಾರೆ. ಶ್ರೀದೇವಿಯ ಮುಖ ಚಹರೆಯನ್ನೇ ಹೊಂದಿರುವ ಜಾನ್ಹವಿ ಅಮ್ಮನ ಹಾಗೇ ಬಾಲಿವುಡ್​ನಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸಾರ್ವಜನಿಕ ವಲಯದಲ್ಲಿ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಜಾನ್ಹವಿ ಫೋಟೊಶೂಟ್​ ಮೊರೆ ಹೋಗಿದ್ದಾರೆ. ಕ್ಯಾಮರಾಗೆ ಫೋಸ್​ ನೀಡಿರುವ ಜಾನ್ಹವಿ ತಮ್ಮ ವಿಭಿನ್ನ ಭಂಗಿಯಿಂದ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ. ಕಾಸ್ಟ್ಯೂಮ್​ ಡಿಸೈನರ್​ ಮನಿಶ್​ ಮಲ್ಹೋತ್ರಾ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಫೋಟೋದಲ್ಲಿ ಜಾನ್ಹವಿ ಗೌನ್​ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಅಲ್ಲದೆ, ಕುಚ್​​ ಕುಚ್​ ಹೋತಾ ಹೈ ಚಿತ್ರದ 20 ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಜಾನ್ಹವಿ ಹಸಿರು ಗೌನ್​ನಲ್ಲಿ ಪೋಸ್​ ನೀಡಿ ಸಿನಿರಸಿಕರ ಕಣ್ಣು ತಮ್ಮತ್ತ ಹರಿಯುವಂತೆ ಮಾಡಿದ್ದಾರೆ. (ಏಜೆನ್ಸೀಸ್​)

View this post on Instagram

💥💥💥 image by @nehachandrakant

A post shared by Tanya Ghavri (@tanghavri) on