ಪತ್ನಿ ಅರುಣಾಲಕ್ಷ್ಮೀಗೆ ಹಣ್ಣು ಕಿತ್ತುಕೊಡಲು ಮಾವಿನ ಮರವೇರಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಕಳೆದ ವರ್ಷದ ಮಹಿಳಾ ದಿನಾಚರಣೆಯಂದು ಪತ್ನಿ ಅರುಣಾಲಕ್ಷ್ಮೀಯವರನ್ನು ಹೂವಿನಿಂದ ಅಲಂಕೃತವಾದ ಸಾರೋಟದಲ್ಲಿ ಕೂರಿಸಿ, ಸ್ವತಃ ತಾವೇ ಆ ಸಾರೋಟವನ್ನು ಚಾಲನೆ ಮಾಡಿ ಗಮನ ಸೆಳೆದಿದ್ದರು.

ಹಾಗೇ ಈ ಬಾರಿಯ ಮಹಿಳಾ ದಿನಾಚರಣೆಯಂದು ತಾವು ಪತ್ನಿಯೊಂದಿಗೆ ಸೇರಿ ರಾಜ್​ಕುಮಾರ್​ ಅವರ ಹಾಡೊಂದಕ್ಕೆ ನೃತ್ಯ ಮಾಡಿದ್ದ ವಿಡಿಯೋವೊಂದನ್ನು ಅರುಣಾಲಕ್ಷ್ಮೀಯವರಿಗೆ ಉಡುಗೊರೆಯಾಗಿ ಕಳಿಸಿದ್ದರು. ಹಾಗೇ ಮಹಿಳೆಯರಿಗೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿ ವಿಶ್​ ಮಾಡಿದ್ದರು. ಒಟ್ಟಿನಲ್ಲಿ ವಿಭಿನ್ನವಾಗಿ ಆಚರಣೆ ಮಾಡಿದ್ದರು.

ಈಗ ಮಾಜಿ ಸಚಿವ  ಗಾಲಿ ಜನಾರ್ದನ ರೆಡ್ಡಿ ಫೇಸ್​ಬುಕ್​ನಲ್ಲಿ ತಮ್ಮ ಬಾಲ್ಯದ ಬಗ್ಗೆ ಪೋಸ್ಟ್​ ಹಾಕಿದ್ದಾರೆ. ಹಾಗೇ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ತಮ್ಮ ಮಾವನ ಮನೆಯ ತೋಟದಲ್ಲಿ ಇದ್ದ ಮಾವಿನ ಮರವನ್ನು ಸ್ವತಃ ತಾವೇ ಹತ್ತಿ ಹಣ್ಣು ಕೊಯ್ದು ಪತ್ನಿಗೆ ನೀಡಿದ್ದಾರೆ. ಅಲ್ಲದೆ ಆ ಮಾವಿನ ಗಿಡವನ್ನು ಅವರೇ ನೆಟ್ಟಿದ್ದು. ಈಗ ಅಷ್ಟೆತ್ತರದ ಮರವಾಗಿದ್ದನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಅದೆಷ್ಟೋ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಹಾಕಿರುವ ಪೋಸ್​ ಹೀಗಿದೆ: ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶಕ್ಕೆ ತೆರಳಿದ್ದೆ. ಹಾಗೇ ನನ್ನ ಧರ್ಮಪತ್ನಿ ಅರುಣಾಲಕ್ಷ್ಮೀ ಜತೆ ಮಾವನವರ ತೋಟಕ್ಕೆ ಭೇಟಿ ಕೊಟ್ಟಿದ್ದೆ. ಆ ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನಹಣ್ಣುಗಳಿಂದ ತುಂಬಿಕೊಂಡಿರುವ ದೃಶ್ಯ ಮನಸೆಳೆಯಿತು. ಕೂಡಲೇ ಮರ ಹತ್ತಿ ಹಣ್ಣು ಕಿತ್ತು ನನ್ನ ಶ್ರೀಮತಿಗೆ ನೀಡಿದೆ. ಹಾಗೇ ಮರವೇರಿ ಇಳಿದ ತಕ್ಷಣ ಬಾಲ್ಯದ ದಿನ ನೆನಪಾಯಿತು. ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು, ಜತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

EMBODYING MEMORIES…..

ನೆನಪಿಗೆ ಬಂದ ಆ ಬಾಲ್ಯದ ದಿನಗಳು …..ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ . ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ . ತೋಟದಲ್ಲಿ ಇಪ್ಪತ್ತ್ ಏಳು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು . ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತಿ ನನ್ನ ಶ್ರೀಮತಿಗೆ ನೀಡಿದೆ . ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು .- ಗಾಲಿ ಜನಾರ್ದನ ರೆಡ್ಡಿEMBODYING MEMORIES…..Recently, I had been to a family function which was held in my father-in-law’s village in Andhra Pradesh. There, I visited his farm along with my wife Smt Lakshmi Aruna, where I came across a mango tree. I was attracted to the mango tree which was planted twenty seven years ago and was full of mangoes. I Could not bear the urge to take it. Hence without wasting a second, I climbed the tree. The incident reminded of my childhood. I used to climb and jump trees with my friends. I sunk into nostalgia. Childhood days are the golden days of ones life. That care-free life is the most precious thing to many. – Gali Janardhan Reddy

Gali Janardhan Reddy ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 20, 2019

Leave a Reply

Your email address will not be published. Required fields are marked *