ಗಾಲಿ ಜನಾರ್ದನ ರೆಡ್ಡಿ ಬಂಧನಕ್ಕಾಗಿ ಸಿಸಿಬಿ ಪೊಲೀಸರ ಕಾರ್ಯಾಚರಣೆ!

ಬೆಂಗಳೂರು: ಆಂಬಿಡೆಂಟ್ ಚಿಟ್ ಫಂಡ್ ಜತೆ ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ನಲ್ಲೇ ಡಿ ಜೆ ಹಳ್ಳಿಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ರೆಡ್ಡಿ ನಿವಾಸ ಪಾರಿಜಾತದಲ್ಲಿ ಶೋಧ ನಡೆಯತ್ತಿದೆ ಎಂದು ಅಪರಾಧ ವಿಭಾಗ ಹೆಚ್ಚುವರಿ ಆಯುಕ್ತ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

ಸದ್ಯಕ್ಕೆ ಎಸಿಪಿ ನೇತೃತ್ವದಲ್ಲಿ ತನಿಖೆ ಆಗುತ್ತಿದ್ದು, ಅದನ್ನು ಡಿಸಿಪಿ ಗಿರೀಶ್ ಮಾನಿಟರ್ ಮಾಡುತ್ತಿದ್ದಾರೆ. ಫರೀದ್ ಮತ್ತು ಅಂಬಿಕಾ ಜ್ಯೂವೆಲರ್ಸ್‌ಗೆ ಸಂಬಂಧ ಇಲ್ಲ. ಅಂಬಿಕಾ ಜ್ಯೂವೆಲ್ಲರ್ ರಮೇಶ್ ಅವರಿಗೆ 7 ಬಾರಿ ಚಿನ್ನ ಕೊಟ್ಟಿದ್ದಾರೆ. ಅದಕ್ಕೆ ಬಿಸ್‌ ಕೂಡ ಇದೆ. ಸದ್ಯ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಭೇಟಿಯಾಗಿರುವುದು, ಹಣ ಕೊಟ್ಟಿರುವುದರ ಬಗ್ಗೆ ಫರೀದ್ ಹೇಳಿರುವುದು ಸತ್ಯಕ್ಕೆ ಹತ್ತಿರವಾಗುತ್ತಿದೆ ಎಂದರು.

ಪಾರಿಜಾತದಲ್ಲಿ ಸರ್ಚ್ ನಡೆಯತ್ತಿದೆ. ಬಳ್ಳಾರಿಗೆ ಒಂದು ಟೀಂ. ‌ಹೈದರಾಬಾದ್‌ಗೆ ಒಂದು ಟೀಂ ಹೋಗಿದೆ. ಈಗಾಗಲೇ ತಾಜ್ ವೆಸ್ಟ್ಎಂಡ್‌ನಲ್ಲಿ ಪಂಚನಾಮೆ ಆಗಿದೆ. ಅಲಿಖಾನ್ ಹೇಳಿದ ದಿನಾಂಕದಲ್ಲಿ ಜನಾರ್ದನ್ ರೆಡ್ಡಿ ಅಲ್ಲಿ ಇದ್ದದ್ದು ನಿಜ ಆಗಿದೆ. ಯಾರಿಗೆಲ್ಲ ಅನ್ಯಾಯವಾಗಿದೆ ಅವರಿಗೆ ನ್ಯಾಯ ಸಿಗಬೇಕು.

ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರೇರಿತ ಇಲ್ಲ. ಚುನಾವಣೆಗೆ ಮೊದಲಿನಿಂದಲೂ ನಾವು ಕೆಲಸ ಮಾಡುತ್ತಿದ್ದೇವೆ. ಪ್ರಕರಣದಲ್ಲಿ ಸುಮ್ಮನೆ ರಾಜಕಾರಣ ಸೇರಿಸುವುದು ಬೇಡ. ಪ್ರಮುಖ ಆರೋಪಿ ಫರೀದ್ ಮಗ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡಗಳು ಇಲ್ಲ. ಪ್ರಕರಣ ಸಂಬಂಧ 20 ದಿನದಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಿ ಕೆ ಡೆವಲಪರ್ಸ್‌ನ ಮಾಲೀಕ ಬ್ರಿಜೇಶ್ ರೆಡ್ಡಿ ಎಂಬವನು ಪ್ರಕರಣದ ಕಿಂಗ್‌ಪಿನ್‌ ಆಗಿದ್ದಾನೆ. ನಗರದ ಎಚ್.ಎಸ್.ಆರ್. ಲೇಔಟ್‌ನಲ್ಲಿ ವಾಸ ಇದ್ದಾನೆ. ಈತ ಬಿಲ್ಡರ್ ಆಗಿದ್ದು, ಅಲಿಖಾನ್ ಸಂಪರ್ಕ ಮಾಡಿಸಿದ್ದ. ಬಳಿಕ ತಾಜ್ ವೆಸ್ಟ್‌ಎಂಡ್‌ನಲ್ಲಿ ಮಿಟಿಂಗ್ ಮಾಡಿದ್ದರು. ತಲೆಮರೆಸಿಕೊಂಡಿರವ ಮಾಜಿ ಸಚಿವ ಜನಾರ್ಧನ ರೆಡ್ಡಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಇದುವರೆಗೆ ಪರೀಧ್‌ನ 12 ಅಕೌಂಟ್‌ಗಳನ್ನು ಸೀಜ್ ಮಾಡಲಾಗಿದೆ.