ಜನಾರ್ದನ ರೆಡ್ಡಿ ಬಂಧನಕ್ಕೆ ಸಿಸಿಬಿ ಸಿದ್ಧತೆ ?

ಬೆಂಗಳೂರು: ಆ್ಯಂಬಿಡೆಂಟ್​ ಕಂಪನಿಯ ಬಹುಕೋಟಿ ಡೀಲ್​ ಹಗರಣದಲ್ಲಿ ನಂಟು ಹೊಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನಕ್ಕೆ ಸಿಸಿಬಿ ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಶನಿವಾರ ರಾತ್ರಿಯಿಡೀ ಜನಾರ್ದನ ರೆಡ್ಡಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಹಲವು ಸಂಗತಿಗಳನ್ನು ರೆಡ್ಡಿ ತಿಳಿಸಿದ್ದರು ಎನ್ನಲಾಗಿದೆ. ಆದರೆ ರಾತ್ರೋರಾತ್ರಿ ಆ್ಯಂಬಿಡೆಂಟ್​ ಮಾಲೀಕ ಫರೀದ್​ ಜನಾರ್ದನ್​ ರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಾನೆ ಎನ್ನಲಾಗಿದೆ.

ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಅವರ ಮಾತನ್ನು ನಂಬಿ ನಾನು ಕೋಟಿಗಟ್ಟಲೆ ಹಣ ಸುರಿದಿದ್ದೆ. ಕೆಜಿಗಟ್ಟಲೆ ಚಿನ್ನ ಕಳಿಸುವಾಗ ನನ್ನ ಪರವಾಗಿದ್ದ ರೆಡ್ಡಿ ಈಗ ನನಗೇ ತಿರುಗಿಬಿದ್ದಿದ್ದಾರೆ. ಅವರ ಮಾತು ಕೇಳಿ 20 ಕೋಟಿ ರೂ.ಕಳೆದುಕೊಂಡಿದ್ದೇನೆ. ಅವರ ಆಪ್ತ ಆಲಿಖಾನ್​ಗೆ ಎಲ್ಲ ವಿಚಾರಗಳೂ ಗೊತ್ತು ಎಂದು ಏರು ಧ್ವನಿಯಲ್ಲಿ ಫರೀದ್​ ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ.