ಆಂಬಿಡೆಂಟ್ ವಂಚನೆ ಪ್ರಕರಣ: 15ಕ್ಕೂ ಹೆಚ್ಚು ಉದ್ಯಮಿ, ರಾಜಕಾರಣಿಗಳಿಗೆ ಜನರ ಕೋಟ್ಯಂತರ ಹಣ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಗೆ 20 ಕೋಟಿ ರೂ. ನೀಡಿದ್ದಲ್ಲದೆ ಉದ್ಯಮಿಯೊಬ್ಬರಿಗೆ 35 ಕೋಟಿ ರೂ., ಆಸೀಫ್​ ಅಲಿ ಎಂಬುವರಿಗೆ 15 ಕೋಟಿ ರೂ. ನೀಡಿದ್ದೇನೆ. ಹಾಗೇ 15 ಕ್ಕೂ ಹೆಚ್ಚು ಉದ್ಯಮಿ, ರಾಜಕಾರಣಿಗಳಿಗೆ ಹಣ ನೀಡಿದ್ದೇನೆ ಎಂದು ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿ. ಕಂಪನಿ ಮಾಲೀಕ ಫರೀದ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇಂದು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್​ಕುಮಾರ್​, ಉದ್ಯಮಿಯೊಬ್ಬರನ್ನು ಎದುರಿಗೆ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದ ವೇಳೆ ಬಾಯ್ಬಿಟ್ಟ ಆರೋಪಿ ಫರೀದ್​ ತಾನು ಯಾರ್ಯಾರಿಗೆ ಹಣಕೊಟ್ಟೀದ್ದೇನೆಂದು ಸಂಪೂರ್ಣ ಮಾಹಿತಿ ನೀಡಿದ್ದಾನೆ.

ವಿಚಾರಣೆ ವೇಳೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್​ ಕುಮಾರ್​ ಆರೋಪಿ ಫರೀದ್​ಗೆ ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಜನರ ದುಡ್ಡು ತಿಂದು ಆರಾಮಾಗಿದ್ದೀಯಾ? ಎಷ್ಟು ದುಡ್ಡು ಕಬಳಿಸಿದ್ದೀಯಾ ಹೇಳು? ಒಂದು ಪೈಸೆಯನ್ನೂ ಬಿಡುವುದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನೀನು ಎಲ್ಲೆಲ್ಲಿ ಆಸ್ತಿ ಮಾಡಿದ್ದೀಯಾ ಎಂದು ನನಗೆ ಗೊತ್ತು. ಜನರ ದುಡ್ಡು ವಾಪಸ್​ ಕೊಡಿಸಬೇಕು ಎಂದೇ ನನಗೆ ಈ ಪ್ರಕರಣದ ತನಿಖೆ ನೀಡಿದ್ದಾರೆ. ಅವರ ಮಾತಿಗೆ ಬೆದರಿದ ಫರೀದ್​ ಎಲ್ಲ ಸತ್ಯವನ್ನೂ ಬಾಯ್ಬಿಟ್ಟಿದ್ದಾನೆ.