More

    ಹೃದಯದ ಮೈಲಿಗೆ ತೊಳೆಯುವ ಅದ್ಭುತ ಲೋಕ ಜಾನಪದ

    ಮುಂಡಗೋಡ: ಜಾನಪದ ಇದೊಂದು ಅದ್ಭುತ ಲೋಕ. ಜನಸಾಮಾನ್ಯರ ಹೃದಯಗಳ ಮೈಲಿಗೆಯನ್ನು ಇದು ತೊಳೆಯುತ್ತದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.

    ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ವತಿಯಿಂದ ಗುರುವಾರ ರಾತ್ರಿ ಆಯೋಜಿಸಿದ್ದ ‘ಜನಪರ ಉತ್ಸವ-2019’ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    84 ಲಕ್ಷ ಜೀವರಾಶಿಗಳಲ್ಲಿ ಮಾನವ ಜಾತಿ ಶ್ರೇಷ್ಠ. ಎಲ್ಲ ಜಾತಿ, ಪಂಥ ಮತ್ತು ಧರ್ಮದವರಿರುವ ಈ ಗ್ರಾಮ ವಿಶೇಷ ಗ್ರಾಮ ಎಂದರು.

    ಮೆರವಣಿಗೆಗೆ ಚಾಲನೆ ನೀಡಿದ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ನಮ್ಮ ಕನ್ನಡ ನಾಡು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಕೂಡಿದ ನಾಡು. ಇಂದಿನ ಪೀಳಿಗೆ ಇವುಗಳ ಬಗ್ಗೆ ಅರಿತಿರಬೇಕು. ಗ್ರಾಮೀಣ ಕಲೆ ನಶಿಸಬಾರದು ಎಂದರು.

    ತಾಪಂ ಸದಸ್ಯ ರಮೇಶ ರಾಯ್ಕರ ಮಾತನಾಡಿ, ಇದು ಹಿಂದುಳಿದ ಗ್ರಾಮವಾದರೂ ನೈಸರ್ಗಿಕ ಸಂಪತ್ತಿಗೆ ಇಲ್ಲಿ ಕೊರತೆ ಇಲ್ಲ ಎಂದರು. ಎಪಿಎಂಸಿ ಅಧ್ಯಕ್ಷ ದೇವು ಪಾಟೀಲ, ಗ್ರಾಮಸ್ಥ ಸಿ.ಕೆ. ಅಶೋಕ ಮಾತನಾಡಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ರಾಜ್ಯದ ಜನಪದ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಯಮನವ್ವ ಹರಿಜನ, ಬಸಯ್ಯಾ ನಡುವಿನಮನಿ, ಸಂತಾನ ಸಿದ್ದಿ, ಬೈರು ಜೋರೆ, ದಾವು ಜೋರೆ ಇತರರಿದ್ದರು. ಪ್ರಕಾಶ ಸಿದ್ದಿ ಪ್ರಾರ್ಥಿಸಿದರು, ಸಹಿಪ್ರಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ದಯಾನಂದ ನಾಯ್ಕ ನಿರೂಪಿಸಿದರು. ಪ್ರಕಾಶ ಮಹಾಲೆ ವಂದಿಸಿದರು.

    ಇದಕ್ಕೂ ಮುನ್ನ ನಾನಾ ತರಹದ ವೇಷಧಾರಿಗಳಾದ ಕಲಾ ತಂಡದವರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ನೋಡುಗರ ಗಮನ ಸೆಳೆದರು.

    ರಾಜ್ಯದ ಹಲವಾರು ಕಲಾ ತಂಡದವರು ಜಾನಪದ ನೃತ್ಯ, ಜಗ್ಗಲಿಗೆ, ಸೋಬಾನ ಪದ, ಸುಗ್ಗಿ ಕುಣಿತ, ಗೊಂಬೆ ಕುಣಿತ ಇನ್ನೂ ಹಲವಾರು ಜನಪದ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಜನಮನ ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts