More

    ಕನ್ನಡ ಮಾತನಾಡಲು ಹಿಂಜರಿಕೆ ಏಕೆ?

    | ಶ್ರೀನಿವಾಸ ಶೆಟ್ಟಿ ತೋನ್ಸೆ ಉಡುಪಿ
    ಕನ್ನಡ ಮಾತನಾಡಲು ಹಿಂಜರಿಕೆ ಏಕೆ?ರಾಜ್ಯೋತ್ಸವ ಸಂದರ್ಭ ಮತ್ತು ಅದರ ಆಚರಣೆ ನಡೆದ ಬಳಿಕ ಕೆಲ ದಿನಗಳ ಕಾಲ ಕನ್ನಡ, ಕರ್ನಾಟಕದ ಸಂಬಂಧವಾಗಿ ರಾಜ್ಯದೆಲ್ಲಡೆ ಕಾಳಜಿಯ ಮಾತುಗಳು ಕೇಳಿಬರುತ್ತವೆ. ರಾಜ್ಯದ ಮುಖ್ಯಮಂತ್ರಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ‘ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಶಿಕ್ಷಣ ಮಾಧ್ಯಮ ಕನ್ನಡವಾಗಬೇಕು’ ಎಂಬ ಒತ್ತಾಯದ ಕೂಗು ಮುಗಿಲು ಮುಟ್ಟುತ್ತದೆ. ಆದರೆ ಇದು ಕೆಲವೇ ದಿನಗಳಲ್ಲಿ ಮರೆತು ಹೋಗುತ್ತದೆ ಎಂಬುದನ್ನು ನಾವು ಅನೇಕ ವರ್ಷಗಳಿಂದ ನೋಡುತ್ತಲೇ ಇದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಈ ವಿಚಾರವಾಗಿ ಗಮನ ಹರಿಸುತ್ತಿಲ್ಲ. ದೂರವಾಣಿಯ ಮೂಲಕ ಒಂದು ಮಾಹಿತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸಂರ್ಪಸಿದಾಗ ಕೇಳಿ ಬಂದ ಧ್ವನಿ-‘ಹಲೊ’. ನಂತರದ ಸಂಭಾಷಣೆಯಲ್ಲಿ ಅಧ್ಯಕ್ಷರು ‘ಮೀಟಿಂಗಿ’ನಲ್ಲಿದ್ದಾರೆ. ‘ಸೆಕ್ಷನ್ ಅವರನ್ನು ಕಾಂಟೆಕ್ಟ್’ ಮಾಡಿ ಅರ್ಧಗಂಟೆಯಲ್ಲಿ ತಿಳಿಸಲಾಗುವುದು. ಫೋನ್ ಮಾಡಿ ಎಂಬುದಾಗಿ ಹೇಳಿದರು. ಕನ್ನಡವನ್ನು ಆಡಳಿತಭಾಷೆಯಾಗಿ ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವ ಕೆಲಸ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ನಡೆಯುತ್ತಿಲ್ಲ. ದೂರವಾಣಿ ಮೂಲಕ ಪ್ರಾಧಿಕಾರವನ್ನು ಸಂರ್ಪಸಿದಾಗ ಅಲ್ಲಿಯೂ ಕೇಳಿಬಂದದ್ದು ಆಂಗ್ಲ ಸಂಭಾಷಣೆಯೇ. ದೂರವಾಣಿ ಕರೆ ಸ್ವೀಕರಿಸುವಾಗ ಜಯಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಕನ್ನಡ ಬೆಳಗಲಿ, ಕನ್ನಡಕ್ಕೆ ಜಯವಾಗಲಿ ಎನ್ನುವುದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ಕರೆ ಸ್ವೀಕರಿಸಲು ಏನು ಅಡ್ಡಿ? ದೂರವಾಣಿಯ ಸಂಪರ್ಕ ಮುಕ್ತಾಯವಾದಾಗ ಧನ್ಯವಾದಗಳು ಎನ್ನಬಹುದಲ್ಲವೇ? ಈ ಸಂಸ್ಥೆಗಳಲ್ಲಿಯೇ ಕನ್ನಡ ಮಾತಾಡಲು ಪ್ರಾಧಾನ್ಯ ಕೊಡದಿರುವಾಗ ಇತರ ಕಚೇರಿಗಳಲ್ಲಿ ಅದರ ನಿರೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts