ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿದಿರುವ ಪವನ್​ ಕಲ್ಯಾಣ್​ರಿಂದ ನಾಮಪತ್ರ ಸಲ್ಲಿಕೆ

ವಿಶಾಖಪಟ್ಟಣಂ: ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಗಜುವಾಕಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಪವನ್​ ಕಲ್ಯಾಣ್​ ಅವರು ಗಜುವಾಖದಲ್ಲಿರುವ ಗ್ರೇಟ್​ ವಿಶಾಖಪಟ್ಟಣಂ ಮುನ್ಸಿಪಲ್​ ಕಾರ್ಪೊರೇಷನ್​(ಜಿವಿಎಂಸಿ)ಮ 5ನೇ ವಲಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಪಾರದರ್ಶಕ ಆಡಳಿತ, ರಾಜಕೀಯ ಹೊಣೆಗಾರಿಕೆ, ಸಾರ್ವಜನಿಕ ಕಲ್ಯಾಣ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಎಂಬ ಮುಂತಾದ ಭರವಸೆಗಳ ಮೇಲೆ ಜನಸೇನಾ ಪಕ್ಷ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದೆ.

ಜನಸೇನಾ ಪಕ್ಷದ ಸಾಮಾನ್ಯ ಸಭೆಯ ನಿರ್ಧಾರದಂತೆ ಪವನ್​ ಕಲ್ಯಾಣ್​ ಅವರು ಗಜುವಾಕಾ ಹಾಗೂ ಭೀಮಾವರಂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ಜನಸೇನಾ ಪಕ್ಷವು ಗಜುವಾಕ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ನಡೆಸಿತು. (ಏಜೆನ್ಸೀಸ್​)