ಇವಿಎಂ ಯಂತ್ರವನ್ನು ನೆಲಕ್ಕೆ ಎಸೆದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಬಂಧನ

ಅಮರಾವತಿ: ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರ ಮತ್ತು 175 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇವಿಎಂ ಯಂತ್ರಕ್ಕೆ ಹಾನಿಯುಂಟುಮಾಡಿದ ಪರಿಣಾಮವಾಗಿ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನಂತಪುರ ಜಿಲ್ಲೆಯ ಗುಂತಕಲ್‌ ವಿಧಾನಸಭೆ ಕ್ಷೇತ್ರದಲ್ಲಿ ಇವಿಎಂ ಯಂತ್ರವನ್ನು ಎಸೆದಿದ್ದಕ್ಕಾಗಿ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುತ್ತಿಯ ಮತದಾನ ಕೇಂದ್ರಕ್ಕೆ ಮತ ಚಲಾವಣೆಗೆಂದು ಬಂದ ಗುಪ್ತಾ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಹೆಸರು ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವ ವಿಚಾರವಾಗಿ ಮತದಾನದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

ಬಳಿಕ ಕೋಪಗೊಂಡು ಇವಿಎಂ ಯಂತ್ರವನ್ನು ತೆಗೆದುಕೊಂಡು ನೆಲಕ್ಕೆ ಎಸೆದಿದ್ದಾರೆ. ಘಟನೆಯಿಂದಾಗಿ ಮತಯಂತ್ರಕ್ಕೆ ಹಾನಿಯಾಗಿದ್ದು, ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *