ಜಮ್ಮುಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್​ ದಾಳಿ

ಶ್ರೀನಗರ: ಜಮ್ಮುಕಾಶ್ಮೀರದ ಎರಡು ಪ್ರದೇಶಗಳಲ್ಲಿ ಉಗ್ರರು ಗ್ರೆನೇಡ್​ ದಾಳಿ ನಡೆಸಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಮೊದಲ ದಾಳಿ ಶ್ರೀನಗರದ ಘಂಟಾಘರ್​ ಚೌಕ್​ ಬಳಿ ಹಾಗೂ ಮತ್ತೊಂದು ದಾಳಿ ಶಾಪಿಯಾನ್​ದ ಪೊಲೀಸ್​ ಶಿಬಿರದ ಮೇಲೆ ನಡೆದಿದೆ.

ಶ್ರೀನಗರದ ಲಾಲ್​ಚೌಕ್​ ಬಳಿ ಉಗ್ರರು ನಡೆಸಿದ ದಾಳಿಯಿಂದ ಸಿಆರ್​ಪಿಎಫ್​ ಬಂಕರ್​, ಅಂಗಡಿಗಳು ಹಾಗೂ ಕಾರುಗಳು ಹಾನಿಗೀಡಾಗಿವೆ. ಯಾವುದೇ ಸಾವುನೋವು ಉಂಟಾದ ವರದಿಯಾಗಿಲ್ಲ.