ಪಾಕಿಸ್ತಾನ ಭೂಪಟದಲ್ಲಿ ಉಳಿಯಲ್ಲ

ಜಮಖಂಡಿ: ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಸೈನಿಕರಿಗೆ ಪೂರ್ಣ ಸ್ವಾತಂತ್ರೃ ನೀಡಿದ್ದಾರೆ. ಪಾಕಿಸ್ತಾನ ಭೂಪಟದಲ್ಲಿ ಉಳಿಯುವುದಿಲ್ಲ, ನನ್ನ ಮಾತು ಈಗ ಅತಿಶಯೋಕ್ತಿ ಎನಿಸಬಹುದು. ಆದರೆ, ಮೋದಿ ಆ ಕಾರ್ಯ ಮಾಡುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ನಂದಿಕೇಶ್ವರ ದೇವಸ್ಥಾನ ಆವರಣದಲ್ಲಿ ಬಿಜೆಪಿ ವಿಧಾನಸಭೆ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ದೇವೇಗೌಡರು ಈಗ ಒಂದಾಗಿದ್ದಾರೆ. ಅವರನ್ನು ಒಂದು ಕೋಣೆಯಲ್ಲಿ ಇಟ್ಟರೆ ಎರಡು ಹೆಣ ಬಿದ್ದಿರುತ್ತವೆ ಎಂದು ವ್ಯಂಗ್ಯವಾಡಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಉಪಚುನಾವಣೆಯಲ್ಲಿ ಇಡೀ ಸರ್ಕಾರ ಜಮಖಂಡಿಯಲ್ಲಿ ಕುಳಿತು ಹಣ ತೂರಾಡಿತು. ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳೋಣ. ಈ ಚುನಾವಣೆಯಲ್ಲಿ ಯುದ್ಧ ರೀತಿ ಕಾರ್ಯ ಮಾಡೋಣ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ನಾನು ಸ್ಪರ್ಧಿಸುವುದಿಲ್ಲ ಎಂದು ನಾಯಕರಿಗೆ ಹೇಳಿದ್ದೆ. ಆದರೆ ಯಡಿಯೂರಪ್ಪ ನೀವೇ ಸ್ಪರ್ಧಿಸಿ ಎನ್ನುತ್ತಿದ್ದಾರೆ. ಹೀಗಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಶಾಸಕ ಗೋವಿಂದ ಕಾರಜೋಳ, ಹನುಮಂತರಾಯ ಬಿರಾದಾರ ಮಾತನಾಡಿದರು. ಜಿ.ಎಸ್. ನ್ಯಾಮಗೌಡ, ನಾರಾಯಣಸಾ ಭಾಂಡಗೆ, ಹಣಮಂತ ನಿರಾಣಿ, ಮಹಾಂತೇಶ ಮಮದಾಪುರ, ಟಿ.ಎ. ಬಿರಾದಾರ, ನಾಗವ್ವ ಕುರಣಿ, ಡಾ.ವಿಜಯಲಕ್ಷ್ಮಿ ತುಂಗಳ, ವಿಜಯಲಕ್ಷ್ಮಿಉಕುಮನಾಳ ಇತರರು ಇದ್ದರು. ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಅಪರಂಜಿ ನಿರೂಪಿಸಿದರು.

ದೇಶ ಭಕ್ತರು, ದೇಶದ್ರೋಹಿಗಳ ನಡುವಿನ ಚುನಾವಣೆ ಇದಾಗಿದೆ. ಪಾಕಿಸ್ತಾನದಲ್ಲಿ ಮೋದಿ ಅವರಂಥ ನಾಯಕರು ನಮ್ಮಲ್ಲಿದ್ದರೆ ನಾವು ಪ್ರಾಣ ಕೊಡುವುದಕ್ಕೆ ಮುಂದಾಗುತ್ತಿದ್ದೆವು ಎನ್ನುತ್ತಾರೆ. ಸೋನಿಯಾ ಗಾಂಧಿ ನಮ್ಮ ಸಂಸ್ಕೃತಿ ಮುರಿದು ದೇಶ ಕೊಳ್ಳೆ ಹೊಡೆಯುತ್ತಿದ್ದಾರೆ. ಪೂಜಾ ಸ್ಥಳವನ್ನು ನಾಶ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿಯಾಗಿದೆ.
ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *