ಬಿಜೆಪಿ ನಾಯಕರಿಂದ ಮೆರವಣಿಗೆ

ಜಮಖಂಡಿ: ಬಾಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವು ಸಾಧಿಸಿದ ಹಿನ್ನೆಲೆ ನಗರ ಸೇರಿ ಕ್ಷೇತ್ರದ ಗ್ರಾಮಗಳಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನಗರದ ಶಿವಾಜಿ ವೃತ್ತದಿಂದ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ತೆರೆದ ವಾಹನದಲ್ಲಿ ಬಸವ ಭವನದವರೆಗೆ ಮೆರವಣಿಗೆ ನಡೆಸಿದರು. ಡಿಜೆ ಹಾಗೂ ಮೋದಿ ಪರ ಹಾಡು, ಘೋಷಣೆಗಳು, ನಿಖಿಲ್ ಎಲ್ಲಿದಿಯಪ್ಪ ಘೋಷಣೆ ಮೊಳಗಿದವು.

ಉದ್ಯಮಿ ಜಗದೀಶ ಗುಡಗುಂಟಿ, ಡಾ. ವಿಜಯಲಕ್ಷ್ಮಿ ತುಂಗಳ, ನಾಗಪ್ಪ ಸನದಿ, ಶೈಲೇಶ ಆಪ್ಟೆ ಸೇರಿ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ನಾಯಕ ವೀರಣ್ಣ ಕಲೂತಿ ಒಂದು ಕ್ವಿಂಟಾಲ್‌ಗೂ ಅಧಿಕ ಲಾಡು ತಯಾರಿಸಿ ಅಭಿಮಾನಿಗಳಿಗೆ ಹಂಚಿದರು.

ಈಶ್ವರ ಆದೆಪ್ಪನವರ, ಏಗಪ್ಪ ಸವದಿ, ಬಸವರಾಜ ಸಿಂಧೂರ, ಡಾ.ರಾಕೇಶ ಲಾಡ, ಸದಾಶಿವ ಕವಟಗಿ, ವಿಜಯಲಕ್ಷ್ಮೀ ಉಕುಮನಾಳ, ರಾಯಭಾ ಜಾಧವ, ಗುರುಪಾದ ಮೆಂಡಿಗೇರಿ, ಮಹಾದೇವ ಇಟ್ಟಿ, ಪ್ರದೀಪ ಮಹಾಲಿಂಗಪುರಮಠ, ಪ್ರಶಾಂತ ಚರಕಿ, ಪೂಜಾ ವಾಳ್ವೇಕರ, ಮಹಾನಂದಾ ಪಾಯಗೊಂಡ, ಶ್ಯಾಮ ಗಣಾಚಾರಿ, ಸಂತೋಷ ಭೋವಿ, ಶಶಿ ಜಗದಾಳ, ಕಿರಣ ಬಾನೆ ಇತರರಿದ್ದರು.

ಮೈಗೂರಲ್ಲಿ ವಿಜಯೋತ್ಸವ: ಮೈಗೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬಸವಣ್ಣ ದೇವಸ್ಥಾನ ಸೇರಿ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರು. ಬಸು ಮಿರ್ಜಿ, ಧರೆಪ್ಪ ಆಲಗೂರ, ಮಲ್ಲು ಪಾಟೀಲ, ಮಹಾವೀರ ಆಲಗೂರ ಇತರರಿದ್ದರು.


Leave a Reply

Your email address will not be published. Required fields are marked *