ಅನ್ಯಗ್ರಹದಲ್ಲಿ ನೀರು ಪತ್ತೆಮಾಡಿದ ಜೇಮ್ಸ್​​ ವೆಬ್!; ಸುಳಿವು ನೀಡಿದ ನಾಸಾದ ಟೆಲಿಸ್ಕೋಪ್..

ವಾಷಿಂಗ್ಟನ್: ಭೂಮಿಯಿಂದ ಸುಮಾರು ಒಂದು ಸಾವಿರ ಜ್ಯೋತಿರ್ವರ್ಷ ದೂರದಲ್ಲಿರುವ ಗ್ರಹದಲ್ಲಿ ನೀರಿರುವ ಸುಳಿವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಜೇಮ್್ಸ ವೆಬ್ ಸ್ಪೇಸ್ ಟೆಲಿಸ್ಕೋಪ್ ನೀಡಿದೆ. WASP 96-b ಹೆಸರಿನ ಗ್ರಹವು ಭಾರಿ ಅನಿಲ, ಮೋಡಗಳು ಮತ್ತು ಮಬ್ಬು ವಾತಾವರಣ ಹೊಂದಿದ್ದು, ಅದರಲ್ಲಿ ನೀರಿನ ಚಿಹ್ನೆಗಳಿರುವುದನ್ನು ಜೇಮ್್ಸ ಟೆಲಿಸ್ಕೋಪ್ ಪತ್ತೆ ಹಚ್ಚಿದೆ ಎಂದು ನಾಸಾ ತಿಳಿಸಿದೆ. ಕ್ಷೀರಪಥದಲ್ಲಿರುವ 5 ಸಾವಿರಕ್ಕೂ ಹೆಚ್ಚು ಎಕ್ಸೋಪ್ಲಾನೆಟ್​ಗಳಲ್ಲಿ WASP 96-b ಕೂಡ ಒಂದಾಗಿದೆ. ಈ ಗ್ರಹ ಭೂಮಿಯಿಂದ 1,150 ಜ್ಯೋತಿರ್ವರ್ಷ ದೂರದಲ್ಲಿದೆ. … Continue reading ಅನ್ಯಗ್ರಹದಲ್ಲಿ ನೀರು ಪತ್ತೆಮಾಡಿದ ಜೇಮ್ಸ್​​ ವೆಬ್!; ಸುಳಿವು ನೀಡಿದ ನಾಸಾದ ಟೆಲಿಸ್ಕೋಪ್..