More

    40 ಸಾವಿರ ಶಾಲಾ ಮಕ್ಕಳಿಂದ “ಜೇಮ್ಸ್​’ ಹಬ್ಬ … ಅಪ್ಪು ರೇಖಾಚಿತ್ರಕ್ಕೆ ಬಣ್ಣದ ತುಂಬಿದ ಚಿಣ್ಣರು

    ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಅವರ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ “ಜೇಮ್ಸ್​’. ಮಾರ್ಚ್​ 17ರಂದು ಪ್ರಸಾರವಾದ “ಜೇಮ್ಸ್​’ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಅಪು$್ಪ ಅಭಿಮಾನಿಗಳು ಥಿಯೇಟರ್​ಗಳಲ್ಲಿ ಹಬ್ಬದಂತೆ ಆಚರಿಸಿದರು. ಇಂತಹ “ಜೇಮ್ಸ್​’ ಇನ್ನು ಕೆಲವೇ ದಿನಗಳಲ್ಲಿ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಜುಲೈ 17ಕ್ಕೆ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಅಭಿಯಾನದ ಮೂಲಕ ಸಾವಿರಾರು ಮಕ್ಕಳ ಜೊತೆ ಸೇರಿ ವಾಹಿನಿಯವರು “ಜೇಮ್ಸ್​’ಅನ್ನು ಕಿರುತೆರೆಗೆ ಬರಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಲಲಿತ್ ಮೋದಿ-ಸುಶ್ಮಿತಾ ಸೇನ್​ ಡೇಟಿಂಗ್​; ಸುಶ್ಮಿತಾ ತಂದೆ ಹೇಳಿದ್ದೇನು?

    ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಮಕ್ಕಳು ಅಂದರೆ ತುಂಬ ಇಷ್ಟ. ಮಕ್ಕಳಿಗೂ ಸಹ ಅಪ್ಪು ಅಂದರೆ ಅಷ್ಟೇ ಇಷ್ಟ. ಹೀಗಾಗಿಯೇ ಸ್ಟಾರ್​ ಸುವರ್ಣ ವಾಹಿನಿ “ಜೇಮ್ಸ್​’ ಪ್ರಪ್ರಥಮ ಬಾರಿಗೆ ಪ್ರಸಾರವಾಗುತ್ತಿರುವ ವೇಳೆಯಲ್ಲಿ ಒಂದು ವಿಶಿಷ್ಟ ಅಭಿಯಾನ ಆಯೋಜಿಸಿದೆ. ರಾಜ್ಯದಾದ್ಯಂತ ನೂರಾರು ಶಾಲೆಗಳ 40 ಸಾವಿರಕ್ಕೂ ಅಧಿಕ ಮಕ್ಕಳಿಂದ ಪುನೀತ್​ ರಾಜ್​ಕುಮಾರ್​ ರೇಖಾಚಿತ್ರಕ್ಕೆ ಬಣ್ಣ ತುಂಬಿಸುವ ಮೂಲಕ ಅಗಲಿದ ನಟನಿಗೆ ನಮನ ಸಲ್ಲಿಸಿದೆ.

    40 ಸಾವಿರ ಶಾಲಾ ಮಕ್ಕಳಿಂದ "ಜೇಮ್ಸ್​' ಹಬ್ಬ ... ಅಪ್ಪು ರೇಖಾಚಿತ್ರಕ್ಕೆ ಬಣ್ಣದ ತುಂಬಿದ ಚಿಣ್ಣರು

    ಪುನೀತ್​ ರೇಖಾಚಿತ್ರಕ್ಕೆ ಬಣ್ಣದ ತುಂಬಿದ ಮಕ್ಕಳೂ ಸಹ ಅಪು$್ಪ ಹಬ್ಬದಲ್ಲಿ ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಅತ್ಯುತ್ತಮವಾಗಿ ಬಣ್ಣ ತುಂಬಿದ ಮಕ್ಕಳಿಗೆ ವಾಹಿನಿ ಕಡೆಯಿಂದ ಪ್ರಶಂಸಾ ಪತ್ರವನ್ನೂ ನೀಡಿರುವುದು ಮಕ್ಕಳ ಖುಷಿಯನ್ನು ಇಮ್ಮಡಿಗೊಳಿಸಿದೆ.

    ಚೇತನ್​ ಕುಮಾರ್​ ನಿರ್ದೇಶನದ ಆಕ್ಷನ್​ ಡ್ರಾಮಾ “ಜೇಮ್ಸ್​’ನಲ್ಲಿ ಪುನೀತ್​ ರಾಜ್​ಕುಮಾರ್​ ಭಾರತೀಯ ಸೇನೆಯ ಮೇಜರ್​ ಪಾತ್ರದಲ್ಲಿ ನಟಿಸಿದ್ದರು. ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್​ ನಟಿಸಿದ್ದು, ಅನು ಪ್ರಭಾಕರ್​, ಶ್ರೀಕಾಂತ್​, ಶರತ್​ ಕುಮಾರ್​, ಮುಕೇಶ್​ ರಿಷಿ, ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಶೈನ್​ ಶೆಟ್ಟಿ, ಸುಚೇಂದ್ರ ಪ್ರಸಾದ್​, ಪದ್ಮಜಾ ರಾವ್​ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚರಣ್​ ರಾಜ್​ ಸಂಗೀತ ನೀಡಿರುವ ಚಿತ್ರವನ್ನು ಕಿಶೋರ್​ ಪತ್ತಿಕೊಂಡ ನಿರ್ಮಾಣದಲ್ಲಿ ಮೂಡಿಬಂದಿತ್ತು.

    ಇದನ್ನೂ ಓದಿ: ಬಿಡುಗಡೆ ಆಯ್ತು ‘ಡೇವಿಡ್​’ ಟ್ರೇಲರ್; ಆಗಸ್ಟ್​ನಲ್ಲಿ ಚಿತ್ರ ತೆರೆಗೆ …

    ಚಿತ್ರದ ಡಬ್ಬಿಂಗ್​ಗೂ ಮುನ್ನವೇ ಪುನೀತ್​ ರಾಜ್​ಕುಮಾರ್​ ವಿಧಿವಶರಾದ ಕಾರಣ ಚಿತ್ರತಂಡ ಶಿವರಾಜ್​ಕುಮಾರ್​ ಅವರಿಂದ ಪುನೀತ್​ ಪಾತ್ರಕ್ಕೆ ವಾಯ್ಸ್​ ಡಬ್​ ಮಾಡಿಸಿತ್ತು. ಬಳಿಕ ಹೈದರಾಬಾದ್​ ಸಂಸ್ಥೆಯೊಂದರ ಸಹಯೋಗದೊಂದಿಗೆ ಪುನೀತ್​ ಅವರ ಧ್ವನಿಯಲ್ಲೇ ಮರುಸೃಷ್ಟಿಸಿದ ಚಿತ್ರತಂಡ ಏಪ್ರಿಲ್​ 22ರಂದು ಮತ್ತೊಮ್ಮೆ “ಜೇಮ್ಸ್​’ ರಿಲೀಸ್​ ಮಾಡಿತ್ತು. ಅದಕ್ಕೂ ಮುನ್ನ ಅರ್ಥಾತ್​ ಏಪ್ರಿಲ್​ 14ರಂದು ಚಿತ್ರದ ಓಟಿಟಿ ರಿಲೀಸ್​ ಆಗಿತ್ತಾದರೂ, ರೀ-ರಿಲೀಸ್​ನಲ್ಲೂ “ಜೇಮ್ಸ್​’ ರಾಜ್ಯದ ಹಲವೆಡೆ ಹೌಸ್​ಫುಲ್​​​ ಪ್ರದರ್ಶನ ಕಂಡಿತ್ತು.

    ಸತತ ಮೂರನೇ ದಿನ ಅಪ್ಪು ಟ್ರೆಂಡ್; ಪುನೀತ್ ರಾಜಕುಮಾರ್​ ‘ಗಂಧದಗುಡಿ’ ಬಿಡುಗಡೆ ದಿನಾಂಕ ಪ್ರಕಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts