ಯೋಗದಿಂದ ಆರೋಗ್ಯ ವೃದ್ಧಿ

ಜಮಖಂಡಿ: ರೋಗಗಳು, ದುಶ್ಚಟ, ಸರಿಯಾದ ಜೀವನ ಕ್ರಮದ ಬಗೆಗಿನ ಅಜ್ಞಾನ, ಅನುಚಿತ ಊಟದ ಪದ್ಧತಿ ಇತ್ಯಾದಿಗಳಿಂದ ಹೊರಬರಲು ಯೋಗ ಒಂದು ಸಾಧನ ಎಂದು ಯೋಗ ಗುರು ಪ್ರೊ.ಎ.ಎಸ್. ಕಂದಗಲ್ ಹೇಳಿದರು.

5ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಪ್ರಾತ್ಯಕ್ಷಿಕೆ ನೀಡುವ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗ ಮಾಡಲು ದುಬಾರಿ ಬೆಲೆಯ ವಸ್ತುಗಳು ಬೇಕಾಗಿಲ್ಲ. ಮನಸ್ಸು ಮತ್ತು ದೇಹದ ಸಂಪೂರ್ಣ ಒಳಗೊಳ್ಳುವಿಕೆ ಮಾತ್ರ ಸಾಕು. ಯೋಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಶರೀರದ ರಕ್ಷಣೆಗೆ ಯೋಗ ಸಹಾಯಕ ಎಂದರು.

ಪ್ರಕೃತಿ ಚಿಕಿತ್ಸಕ ಮತ್ತು ಯೋಗ ತಜ್ಞ ಡಾ.ಬಾಹುಬಲಿ ಎಂ.ಎಸ್., ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಗಿರೀಶ ಕಡ್ಡಿ, ಆಲಗೂರ ಪುನರ್ವಸತಿ ಕೇಂದ್ರದ ಆರ್‌ಎಂಎಸ್‌ಎ ಪ್ರೌಢಶಾಲೆ ಮುಖ್ಯಶಿಕ್ಷಕ ಭೂಷಣ ಪತ್ತಾರ, ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ ಇದ್ದರು.

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ ತಮದಡ್ಡಿ ಪರಿಚಯಿಸಿದರು. ಆಡಳಿತಾಕಾರಿ ಪ್ರೊ.ಬಸವರಾಜ ಕಡ್ಡಿ ವಂದಿಸಿದರು.

Leave a Reply

Your email address will not be published. Required fields are marked *