ಸಿಎ ಕಲಿಕೆಗೆ ಆರ್ಥಿಕ ತೊಂದರೆ

ಜಮಖಂಡಿ: ನಗರದ ಬಿಎಲ್‌ಡಿಇ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಕಾಲೇಜಿಗೇ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿ ಪ್ರದೀಪ ಮಲ್ಲಿಕಾರ್ಜುನ ಬಿಜ್ಜರಗಿ, ಪ್ರತಿಶತ 95ರಷ್ಟು ಅಂಕ ಪಡೆದಿದ್ದು, ಮುಂದೆ ಸಿಎ ಮಾಡುವ ಕನಸಿದ್ದರೂ ಹಣದ ತೊಂದರೆಯಿಂದ ಬಳಲುವಂತಾಗಿದೆ.

ಜಯನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಕೆಲಸ ಮಾಡುವ ತಾಯಿ, ಕನ್ನಡಕ ಅಂಗಡಿಯಲ್ಲಿ ದುಡಿಯುವ ಸಹೋದರ ಇವರಿಬ್ಬರೇ ಈತನಿಗೆ ಆಸರೆ. ಪ್ರದೀಪ ಕೂಡ ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದಾಗಲೂ ಬಿಡುವಿನ ಸಂದರ್ಭದಲ್ಲಿ ಪೆಂಟಿಂಗ್ ಕೆಲಸ ಮಾಡುತ್ತ ಶೇ. 85.60 ರಷ್ಟು ಅಂಕಗಳಿಸಿದ್ದ. ಪ್ರಥಮ ಪಿಯುಸಿಯಲ್ಲಿ ಟೈಪಿಂಗ್ ಕಾರ್ಯ ಮಾಡುತ್ತ ಕಾಲೇಜಿನ ಶುಲ್ಕ ತುಂಬಿಕೊಂಡಿದ್ದ, ಈಗ ಪಿಯುನಲ್ಲೂ ಉತ್ತಮ ಅಂಕ ಪಡೆದು ಖುಷಿಯಿದ್ದರೂ, ಮುಂದಿನ ಅಭ್ಯಾಸಕ್ಕೆ ಹಣ ಹೊಂದಿಸಲು ಪರದಾಡುತ್ತಿದ್ದಾನೆ.

ಸಿಎ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಾಲ ನೀಡಲು ಅವಕಾಶವಿಲ್ಲ ಎಂದು ಬ್ಯಾಂಕಿನವರು ಹೇಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಬ್ಯಾಂಕ್ ಆ್ ಮಹಾರಾಷ್ಟ್ರ 60081958686 ಐಎ್ಎಸ್‌ಸಿ : ಎಂಎಎಚ್‌ಬಿ 0001513 ಖಾತೆಗೆ ಹಣ ಕಳಿಸಬಹುದು. ಮಾಹಿತಿಗೆ ಮೊ. 6360121350/ 7676290360 ಸಂಪರ್ಕಿಸಬಹುದು.

ಪ್ರದೀಪ ಪಿಯು ಕಾಮರ್ಸ್ ವಿಭಾಗದಲ್ಲಿ ಒಟ್ಟು 573 ಅಂಕ ಗಳಿಸಿದ್ದು, ಇಂಗ್ಲಿಷ್ 93, ಹಿಂದಿ 94, ಅಂಕೌಂಟೆನ್ಸಿ 99, ಬಿಸಿನೆಸ್ ಸ್ಟಡಿ 99, ಎಕನಾಮಿಕ್ಸ್ 98, ಪಾಲಿಟಿಕಲ್ ಸೈನ್ಸ್ 90 ಒಟ್ಟು ಶೇ.95.5ರಷ್ಟು ಅಂಕಗಳಿಸಿದ್ದಾನೆ.