ಜಾತಿ ಸಂಕೋಲೆ ಕಳಚಿ ಮತದಾನ

ಜಮಖಂಡಿ: ದೇಶದ ಅಭಿವೃದ್ಧಿಗೆ ಜಾತಿ ಸಂಕೋಲೆಯಿಂದ ಹೊರಬಂದು ಮತದಾರರು ಮತದಾನಕ್ಕೆ ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.

ನಗರದ ಉದ್ಯಮಿ ಜಗದೀಶ ಗುಡಗುಂಟಿ ಅವರ ನಿವಾಸದಲ್ಲಿ ಭಾರತಿಯ ಜನತಾ ಪಕ್ಷದ ಆಶ್ರಯದಲ್ಲಿ ನಡೆದ ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಚುನಾವಣೆಯಲ್ಲಿ ಜಾತಿ, ಹಣದ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಬಿಜೆಪಿ ಕಾರ್ಯಕರ್ತರಷ್ಟೆ ಚುನಾವಣೆ ಪ್ರಚಾರ ಮಾಡುತ್ತಿಲ್ಲ, ಬದಲಾಗಿ ನೂರಾರು ಸಂಘಟನೆಗಳು ಮತದಾನದ ಬಗ್ಗೆ ಸಕ್ರಿಯವಾಗಿ ಕಾರ್ಯ ಮಾಡುತ್ತಿವೆ. ಬಿಜೆಪಿಯಿಂದ ಲಾಪೇಕ್ಷೆ ಇಲ್ಲದೆ ಅವರು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ರಾಜಕಾರಣಿಗಳು, ರಾಜಕಾರಣ ಎಂದರೆ ಹೇಸಿಗೆಯಂತಾಗಿತ್ತು. ಮತದಾನ ಮಾಡುವುದಕ್ಕೆ ಯಾರೂ ಅಷ್ಟೊಂದು ಉತ್ಸಾಹ ತೋರುತ್ತಿರಲಿಲ್ಲ. ಆದರೆ, ಇಂದು ಮೋದಿ ಅವರಿಗಾಗಿ ಸಮಾಜದ ಜನ ಹರಕೆ ಹೊರುತ್ತಿದ್ದಾರೆ ಎಂದರು.

5 ವರ್ಷದಲ್ಲಿ ಮೋದಿ ದೇಶವನ್ನು ಸುರಕ್ಷಿತವಾಗಿಟ್ಟಿದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಕೋಟ್ಯಂತರ ಬಡವರಿಗೆ ಶೌಚಗೃಹ, ಉಚಿತ ಸಿಲಿಂಡರ್ ಗ್ಯಾಸ್ ಸೌಲಭ್ಯ ಸೇರಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಡಾ. ವಿಜಯಲಕ್ಷ್ಮೀ ತುಂಗಳ ಮಾತನಾಡಿದರು. ನಗರ ಘಟಕ ಅಧ್ಯಕ್ಷ ರಾಕೇಶ ಲಾಡ, ಗ್ರಾಮಿಣ ಘಟಕ ಅಧ್ಯಕ್ಷ ಈಶ್ವರ ಆದೆಪ್ಪನವರ ಇದ್ದರು. ಹರೀಶ ಪವಾರ ವಂದೆ ಮಾತರಂ ಗೀತೆ ಹಾಡಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಸಿ.ಟಿ.ಉಪಾಧ್ಯಾಯ ನಿರೂಪಿಸಿದರು. ಅಜಯ ಕಡಪಟ್ಟಿ ವಂದಿಸಿದರು.

Leave a Reply

Your email address will not be published. Required fields are marked *