ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಾವು

ಜಮಖಂಡಿ(ಗ್ರಾ): ತಾಲೂಕಿನ ಮರೇಗುದ್ದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಸಪ್ಪ ಪರುತಬಾದಿ (40) ಅಪಘಾತದಲ್ಲಿ ಶುಕ್ರವಾರ ಮೃತರಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗ್ರಾಮದ ಬಡ್ಡಿ ಬಡಾವಣೆಯ ಎತ್ತರ ಪ್ರದೇಶದಿಂದ ಇಳಿಜಾರಿನತ್ತ ಟ್ರಾೃಕ್ಟರ್ ಆಗಮಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಗ್ರಾಮದ ಅಂಕಲಿ ಸಿದ್ಧೇಶ್ವರ ದೇವಸ್ಥಾನ ಬಳಿ ಟ್ರೇಲರ್‌ನೊಂದಿಗೆ ಉರುಳಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ನಗರದ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರು ಇತ್ತೀಚೆಗೆ ಅವಿಶ್ವಾಸ ಮಂಡಿಸಿ ಮೀನಾಕ್ಷಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈಗ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.





Leave a Reply

Your email address will not be published. Required fields are marked *