ಪರಿಸರ ನಾಶ ವಿನಾಶದ ಸೂಚನೆ

ಜಮಖಂಡಿ(ಗ್ರಾ): ಭೂ ಮಂಡಲದ ಮಾನವ ಸಹಿತ ಸಕಲ ಜೀವಿಗಳು ಮತ್ತು ಪರಿಸರ ನಾಣ್ಯದ ಎರಡು ಮುಖಗಳಿದಂತೆ. ಅವು ಒಂದನ್ನೊಂದು ಬಿಟ್ಟು ಇರಲಾರವು. ಹೀಗಾಗಿ ಹೆಚ್ಚುತ್ತಿರುವ ಪರಿಸರ ನಾಶ ಮಾನವನ ಮತ್ತು ಸಕಲ ಜೀವಿಗಳ ವಿನಾಶದ ಸೂಚನೆಯಾಗಿದೆ ಎಂದು ಕಡಪಟ್ಟಿ ಗ್ರಾಪಂ ಪಿಡಿಒ ಉಮೇಶ ಸಾವಳಗಿ ಹೇಳಿದರು.

ಸಮೀಪದ ಹಿಪ್ಪರಗಿಯ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ಪಂಚಾಯಿತಿ ಮತ್ತು ವಿಜಯವಾಣಿ-ದಿಗ್ವಿಜಯ ಸುದ್ದಿ ವಾಹಿನಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಹಸಿರು ಕರ್ನಾಟಕ ಅಭಿಯಾನದಲ್ಲಿ ಅವರು ಮಾತನಾಡಿದರು.

ಪರಿಸರ ನಾಶದಿಂದ ಎಲ್ಲ ಜೀವಿಗಳಿಗೆ ಅಪಾಯ ಎದುರಾಗುತ್ತಿದೆ. ಹೀಗಾಗಿ ಪರಿಸರದ ಉಳಿವಿಗಾಗಿ ನಾವೆಲ್ಲರೂ ಕೈ ಜೊಡಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ದೊಡ್ಡವ್ವ ಕನಶೆಟ್ಟಿ ಉದ್ಘಾಟಿಸಿದರು. ಎಸ್.ಪಾಟೀಲ ಸಸಿಗಳನ್ನು ನೆಟ್ಟರು. ಗ್ರಾಪಂ ಸದಸ್ಯರಾದ ಸಂಗಪ್ಪ ಹೊಸಮನಿ, ಸದಾಶಿವ ಬಾಗೇವಾಡಿ, ಸಿದ್ದಮಲ್ಲ ಮಂಟೂರ, ಲಕ್ಕಪ್ಪ ಕಂಬಾರ, ನಿಂಗಪ್ಪ ದೇಸಾಯಿ, ನಿಂಗಪ್ಪ ಹಡಪದ, ಗೂಳಪ್ಪ ಶಿವಪೂಜಿ, ಗಿರಮಲ್ಲಪ್ಪ, ಈರಗೌಡ ಪಾಟೀಲ, ಪರಪ್ಪ ತಳವಾರ, ಯುವಕರು ಮತ್ತು ಹಿರಿಯರು ಇದ್ದರು. ಆದಬಸಪ್ಪಗೊಳ ಬಾಣಕಾರ ಸ್ವಾಗತಿಸಿದರು. ಆಶೀಮ್ ಬನಹಟ್ಟಿ ಪ್ರಾರ್ಥಿಸಿದರು. ಗಿರೀಶ ಯಲಗೊಂಡ ನಿರೂಪಿಸಿದರು. ವಿಠಲ ಕನಶೆಟ್ಟಿ ವಂದಿಸಿದರು.

ಪರಿಸರವೇ ನಿಜವಾದ ಸಂಪತ್ತು
ಪರಿಸರವೇ ಪವಿತ್ರ ಮತ್ತು ನಿಜವಾದ ಸಂಪತ್ತು ಎಂದು ಕಡಪಟ್ಟಿ ಪಿಡಿಒ ಬಿ.ಎಲ್. ನಾಟಿಕಾರ ಹೇಳಿದರು.
ತಾಲೂಕಿನ ಕಡಪಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಪಂ ಮತ್ತು ವಿಜಯವಾಣಿ-ದಿಗ್ವಿಜಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹಸಿರು ಕರ್ನಾಟಕ ಅಭಿಯಾನದಲ್ಲಿ ಅವರು ಮಾತನಾಡಿದರು. ಪರಿಸರ ರಕ್ಷಣೆ ಮಾಡಿದರೆ ಮಾತ್ರ ನಮ್ಮ ಬದುಕು ಸುಸೂತ್ರವಾಗಿರುತ್ತದೆ ಎಂದರು.

ರಫೀಕ್ ಮಾರಪ್ಪನಳ್ಳಿ ಉದ್ಘಾಟಿಸಿದರು. ಸಿದ್ದಪ್ಪ ನೇಸೂರ ಶಿಂಧೆ ಸಸಿಗಳನ್ನು ನೆಟ್ಟರು. ಶಿಕ್ಷಕಿ ಸಕ್ಕವ್ವ ಇಟ್ಟಿ ವಂದಿಸಿದರು. ಗ್ರಾಪಂ ಕಾರ್ಯದರ್ಶಿ ಬಿಳೋಳ, ಕಾವಲುಗಾರ ಹನುಮಂತ ನಿಲಕಂಟಿ ಇತರರಿದ್ದರು. ಗ್ರಾಪಂ ಸಿಂಬ್ಬದಿ ಪಂಡಿತ ಇಟ್ಟಿ ಸ್ವಾಗತಿಸಿದರು. ಜೋತ್ಯಿ ಪಾಟೀಲ ಪ್ರಾರ್ಥಿಸಿದರು. ಶ್ರೀಕಾಂತ ಜಾಲಿಬೇರಿ ನಿರೂಪಿಸಿದರು.

Leave a Reply

Your email address will not be published. Required fields are marked *