More

  ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ

  ಮಾಂಜರಿ: ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿ ಗ್ರಾಮದಲ್ಲಿ 3.97 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಲಾಯಿತು.

  ಗ್ರಾಪಂ ಅಧ್ಯಕ್ಷ ಸುಮನ ಶೇಳಕೆ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮದ ಮನೆಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಗುತ್ತಿಗೆದಾರರು ಗುಣಮಟ್ಟದೊಂದಿಗೆ ನಿಗದಿತ ವೇಳೆಯಲ್ಲಿ ಕಾಮಗಾರಿ ಮುಗಿಸಬೇಕು. ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.

  ಗ್ರಾಪಂ ಉಪಾಧ್ಯಕ್ಷೆ ವಂದನಾ ಕಾಂಬಳೆ, ಸದಸ್ಯರಾದ ವಿಲಾಸ ಪವಾರ, ಶಾಂತಿನಾಥ ಪಣದೆ, ಗಜು ಮಗದುಮ್ಮ, ಬಸವರಾಜ ಚೌಗುಲಾ, ಮುಖಂಡರಾದ ರಾಮ ಐಹೊಳೆ, ಸಂಜಯ ಗುರವ, ಪ್ರಕಾಶ ಪಾಟೋಳೆ, ರಾಜು ಪವಾರ, ನೇತಾಜಿ ಮುಳಿಕ, ಸಂಜಯ ಮಾನೆ, ಪೋಪಟ ಕೆಟಗಾಳೆ, ವಿಠ್ಠಲ ಶಿಂಪಿ, ಪ್ರಕಾಶ ಚಿಗರೆ, ಅಣ್ಣಾಸಾಬ ಚಿಂಚಲೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts