Tuesday, 11th December 2018  

Vijayavani

Breaking News

ಬಾಹುಬಲಿ ಮೂರ್ತಿಗೆ ಚಡ್ಡಿ ಹಾಕಲು ಸಿಎಂಗೆ ಪತ್ರ: ಜೈನ ಸಮುದಾಯದಿಂದ ಸದಲಗಾ ಬಂದ್​

Friday, 12.01.2018, 12:58 PM       No Comments

ಸದಲಗಾ (ಬೆಳಗಾವಿ): ಶ್ರವಣಬೆಳಗೊಳದ ವಿಶ್ವ ವಿಖ್ಯಾತ ಬಾಹುಬಲಿ ಮೂರ್ತಿಗೆ ಚಡ್ಡಿ ಹಾಕಿ ಎಂದು ಪತ್ರಕರ್ತರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದನ್ನು ಖಂಡಿಸಿ ಜೈನ ಸಮುದಾಯ ಬೆಳಗಾವಿ ಜಿಲ್ಲೆಯ, ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಬಂದ್​ಗೆ ಕರೆ ನೀಡಿದೆ.

ಪತ್ರಕರ್ತ ಪ್ರಭು ಆದಿ ಎಂಬುವವರು ಬಾಹುಬಲಿಗೆ ಚಡ್ಡಿ ಹಾಕಿ ಎಂದು ಸಿಎಂಗೆ ಪತ್ರ ಬರೆದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಇಂದು ಬಂದ್​ಗೆ ಕರೆ ನೀಡಿದ್ದು, ಪ್ರತಿಭಟನಾ ಮೆರವಣಿಗೆ ನಡೆಸಿತು. ಬಂದ್​ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್​ ಮಾಡಲಾಗಿದೆ.

ಜೈನ ಸಮುದಾಯದವರು ರ‍್ಯಾಲಿ ನಡೆಸಿ ತಹಸೀಲ್ದಾರ್​ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

Back To Top