ಏರ್​ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈ ಹಿಂದ್​ ಘೋಷಣೆ ಕಡ್ಡಾಯ

ನವದೆಹಲಿ: ಏರ್​ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈಹಿಂದ್​ ಎಂಬ ಘೋಷಣೆ ಕೇಳಿಬರಲಿದೆ. ವಿಮಾನ ಸಿಬ್ಬಂದಿ ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಪಾಲನೆ ಮಾಡಬೇಕು ಎಂದು ಏರ್ ಇಂಡಿಯಾ ಕಾರ್ಯಕಾರಿ ನಿರ್ದೇಶದ ಅಮಿತಾಬ್​ ಸಿಂಗ್​ ಸೂಚಿಸಿದ್ದಾರೆ.

ಜೈ ಹಿಂದ್​ ಘೋಷಣೆಯಿಂದ ಪ್ರಯಾಣಿಕರಲ್ಲಿ ಉತ್ಸಾಹವೂ ಹೆಚ್ಚುತ್ತದೆ. ಅಲ್ಲದೆ ಸದ್ಯದ ರಾಷ್ಟ್ರದ ಜನರ ಮನಸ್ಥಿತಿ ದೇಶಕ್ಕಾಗಿ ತುಡಿಯುತ್ತಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಏರ್​ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾದ ಮಾಜಿ ಮುಖ್ಯಸ್ಥ ಅಶ್ವನಿ ಲೋಹಾನಿ 2016ರಲ್ಲಿ ಇದೇ ರೀತಿ ಆದೇಶ ಹೊರಡಿಸಿದ್ದರು. ವಿಮಾನ ವಿಳಂಬದ ಸಮಯದಲ್ಲಿ ಸಿಬ್ಬಂದಿ ಅನಾದರಣೀಯವಾಗಿ, ಕಾಳಜಿಯಿಲ್ಲದ ರೀತಿ ವರ್ತಿಸುತ್ತಾರೆ ಎಂದು 2016ರಲ್ಲಿ ಗ್ರಾಹಕರಿಂದ ದೂರು ಬರತೊಡಗಿತ್ತು. ಆಗ ಅಶ್ವನಿ ಈ ನಿರ್ಧಾರ ತೆಗೆದುಕೊಂಡಿದ್ದರು.

ವಿಮಾನ ಟೇಕ್ಆಫ್​ ಆಗುವ ವೇಳೆ ಫ್ಲೈಟ್​ ಕಮಾಂಡರ್​ ಜೈ ಹಿಂದ್​ ಎಂದು ಘೋಷಣೆ ಕೂಗಬೇಕು ಎಂದು ಹೇಳಿದ್ದರು. ಇದು ಅದ್ಭುತ ಪ್ರಭಾವ ಬೀರಿತ್ತು. ಪ್ರಯಾಣಿಕರು ಮತ್ತು ಏರ್​ಲೈನ್​ ಸಿಬ್ಬಂದಿ ಮಧ್ಯ ಉತ್ತಮ ಸೌಹಾರ್ದ ಮೂಡಿಸುವಲ್ಲಿ ಇದು ಸಹಕಾರಿಯಾಗಿತ್ತು.