ಮಡಿಕೇರಿ:
ಮಡಿಕೇರಿ ಅಂಬೇಡ್ಕರ್ ಸಮುದಾಯ ಭವನದಿಂದ ಜನರಿಗೆ ಅನುಕೂಲ ಆಗಿದ್ದು, ಈಗಿನ ಸಮಿತಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಮೂರ್ನಾಡು ಜೈ ಭೀಮ್ ಯುವಕ ಸಂಘದ ಅಧ್ಯಕ್ಷ ಈರ ಸುಬ್ಬಯ್ಯ ಹೇಳಿದ್ದಾರೆ.
ಅಂಬೇಡ್ಕರ್ ಸಮಯದಾಯ ಭವನದ ವಿರುದ್ಧ ಆರೋಪ ನಿರಾಧಾರ. ಅಂಬೇಡ್ಕರ್ ಭವನ ಅಶೋಕಪುರ ಜನರಿಂದ ನಿರ್ಮಾಣ ಆಗಿದೆ. ಇದರಿಂದ ಜನರಿಗೆ ಅನುಕೂಲ ಆಗಿದೆ. ಸಮಿತಿಯವರಿಂದ ನಿರ್ವಹಣೆ ಚೆನ್ನಾಗಿದೆ. ಎಲ್ಲಾ ಜಾತಿಯವರ ಕಾರ್ಯಕ್ರಮಕ್ಕೂ ಕೊಡಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮವೂ ನಡೆಯುತ್ತಿದೆ. ಪ್ರಾಕೃತಿಕ ವಿಕೋಪ ಸಂದರ್ಭ 100 ಜನರಿಗೆ ಇಲ್ಲಿ ಆಶ್ರಯ ಕೊಡಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭವನ ನಿರ್ಮಾಣದಲ್ಲಿ ಈಗಿನ ಅಧ್ಯಕ್ಷರ ಶ್ರಮ ಹೆಚ್ಚು ಇದೆ. ಅಲ್ಲಿ ಇನ್ನೂ ಕೆಲಸಗಳು ಆಗಬೇಕಿದ್ದು ಈ ಆಡಳಿತ ಮಂಡಳಿಗೆ ಸಂಪೂರ್ಣ ಬೆಂಬಲ ಕೊಡಲಾಗುವುದು. ಹಲವು ಕಡೆಗಳಲ್ಲಿ ಅಂಬೇಡ್ಕರ್ ಭವನ ಕೆಟ್ಟ ಸ್ಥಿತಿಯಲ್ಲಿ ಇದೆ.
ಅವುಗಳನ್ನು ಅಭಿವೃದ್ಧಿ ಮಾಡಬೇಕು. ಸಮುದಾಯ ಭವನ ವಿರುದ್ಧ ಯಾವುದೇ ಹೋರಾಟ ಮಾಡಬಾರದು. ಸಮಸ್ಯೆಗಳು ಇದ್ದರೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು. ಅಂಬೇಡ್ಕರ್ ಭವನ ಮುಂದೆ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ರಘು ಬೈರ, ಪ್ರಮುಖರಾದ ಮುದ್ದುರಾಜ್, ಜಗದೀಶ್, ಹೆಚ್.ಪಿ. ರಘು ಅಪ್ಪಂಗಳ ಸುದ್ದಿಗೋಷ್ಠಿಯಲ್ಲಿ ಇದ್ದರು.