ಬಿದರಕೆರೇಲಿ ಗುರುಸಿದ್ದಸ್ವಾಮಿ ತೇರು

ಜಗಳೂರು: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗುರುಸಿದ್ದಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆಯಿಂದ ಪೂಜೆ ವಿಧಿ, ವಿಧಾನಗಳು ನೆರವೇರಿದವು, ಭಕ್ತಾದಿಗಳು ರಥಕ್ಕೆ ಬಾಳೆಹಣ್ಣು, ಉತ್ತ ತ್ತಿ ಎಸೆದು ಹರಕೆ ತೀರಿಸಿದರು. ನಿಬಗೂರು, ರಸ್ತೆ ಮಾಕುಂಟೆ, ತೋರಣಗಟ್ಟೆ, ಕಟ್ಟಿಗೆಹಳ್ಳಿ, ಬಿದರಕೆರೆ ಗೊಲ್ಲರಹಟ್ಟಿ ಸೇರಿ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿದ್ದರು.

ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಾಯಿತು. ಇಂದು ರಂಗಭೂಮಿ ಕಲೆಯ ಆಸಕ್ತಿಯು ಕ್ಷೀಣಿಸುತ್ತಿದ್ದು, ಯುವ ಸಮೂಹ ಪೌರಾಣಿಕ ನಾಟಕಗಳನ್ನು ವೀಕ್ಷಿಸುವ ಮೂಲಕ ದೇಶದ ಸಂಸ್ಕೃತಿ, ನೆಲದ ಪ್ರಾಮುಖ್ಯತೆ, ಗತಿಸಿದ ಇತಿಹಾಸವನ್ನು ಅರಿತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕುರುಕ್ಷೇತ್ರ ನಾಟಕ ಪ್ರೇರಣೆಯಾಗಿದೆ ಎಂದು ಭೀಮನ ಪಾತ್ರಧಾರಿ ಬಿ.ರವಿಕುಮಾರ್ ಬಿದರಕೆರೆ ಹೇಳಿದರು.

ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್, ತಾಪಂ ಸದಸ್ಯ ಬಸವರಾಜ್, ಗ್ರಾಪಂ ಅಧ್ಯಕ್ಷ ಸಿ.ಬಸವರಾಜ್, ಮುಖಂಡರಾದ ನಿಂಗಪ್ಪ, ಏಕಾಂತಪ್ಪ, ಧರ್ಮಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಇದ್ದರು.