22.5 C
Bengaluru
Sunday, January 19, 2020

ಕಾವೇರಿ ಕೂಗಿಗೆ ಕೆಪಿಎಲ್ ಸಾಥ್: ಈಶ ಫೌಂಡೇಷನ್​ನಿಂದ ಅಭಿಯಾನ, ಸದ್ಗುರು ಸಂದರ್ಶಿಸಿದ ಕೆ.ಎಲ್. ರಾಹುಲ್

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಈಶ ಫೌಂಡೇಷನ್ ನಡೆಸುತ್ತಿರುವ ‘ಕಾವೇರಿ ಕೂಗು’ ಎಂಬ ಅಭಿಯಾನಕ್ಕೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕೈಜೋಡಿಸಿದೆ. ಕಾವೇರಿ ಕೂಗಿನ ಅಭಿಯಾನದ ರೂಪುರೇಷೆ ಮತ್ತು ಕೆಪಿಎಲ್ ಮಾಡಬೇಕಿರುವ ಕೆಲಸ ಕುರಿತಂತೆ ಈಶ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಭಾನುವಾರ ನಗರದಲ್ಲಿ ಸಂವಾದ ನಡೆಸಿದರು. ಸದ್ಗುರು ಅವರನ್ನು ಭಾರತೀಯ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಸಂದರ್ಶನ ನಡೆಸುವ ಮೂಲಕ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು.

# ‘ಕಾವೇರಿ ಕೂಗು’ ಅಭಿಯಾನವನ್ನು ಹೇಗೆ ರೂಪಿಸಲಾಗಿದೆ? ಯಾರೆಲ್ಲ ಭಾಗವಹಿಸುತ್ತಾರೆ?

ಇದು ಕೇವಲ ನನ್ನೊಬ್ಬನ ಯೋಜನೆಯಾಗಿಲ್ಲ. ಕಾವೇರಿ ನೀರು ಕುಡಿಯುತ್ತಿರುವವರೆಲ್ಲರೂ ಇದರಲ್ಲಿ ಭಾಗವಹಿಸಬೇಕೆನ್ನುವ ಆಶಯ ಇದರ ಹಿಂದೆ ಇದೆ. ಮುಂದಿನ ಪೀಳಿಗೆಗೆ ಕಾವೇರಿ ನೀರನ್ನು ಉಳಿಸುವ ದೃಷ್ಟಿಯಿಂದ ಗಿಡ ನೆಡುವ ಅಭಿಯಾನ ಇದಾಗಿದೆ.

# ನೀರಿನ ಅಲಭ್ಯತೆ ಬಗ್ಗೆ ನನಗೂ ಅರಿವಾಗಿದೆ. ಇದನ್ನು ಜನರಿಗೆ ಹೇಗೆ ತಿಳಿಸುತ್ತೀರಿ?

ಮಳೆಯಿಂದ ನಮಗೆ ನೀರು ದೊರೆಯುತ್ತಿದೆ. ಇದನ್ನು ಸಂಗ್ರಹಿಸಲು ಕೇವಲ ಅಣೆಕಟ್ಟೆ ಕಟ್ಟಿದರೆ ಸಾಲದು. ಬದಲಾಗಿ ನೀರನ್ನು ಹಿಡಿದಿಡುವ ಶಕ್ತಿ ಹೊಂದಿರುವಂತಹ ಗಿಡಗಳನ್ನು ನದಿಪಾತ್ರದುದ್ದಕ್ಕೂ ನೆಡಬೇಕಿದೆ. ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಬೈಕ್ ರ‍್ಯಾಲಿ ಮಾಡುತ್ತೇವೆ. ಸಾಮಾಜಿಕ ತಾಲತಾಣವನ್ನೂ ಬಳಸಿಕೊಳ್ಳುತ್ತೇವೆ.

# ಗಿಡ ನೆಡುವುದಕ್ಕೆ 42 ರೂ. ಏಕೆ ಬೇಕು? ಇದು ದುರುಪಯೋಗ ಅಗುವುದಿಲ್ಲವೇ?

ಜನರು ಗಿಡ ನೆಡುವುದಕ್ಕಾಗಿ ನೀಡುವ 42 ರೂ. ಈಶ ಫೌಂಡೇಷನ್​ಗೆ ಸೇರುವುದಿಲ್ಲ. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ರಚನೆ ಮಾಡಿದ್ದೇವೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸಮಿತಿಯಲ್ಲಿದ್ದಾರೆ. ಕೆಲವು ಕಡೆ 25 ರೂ.ನಿಂದ 100 ರೂ.ವರೆಗೆ ವೆಚ್ಚವಾಗುತ್ತದೆ. ಆದರೆ, ನಾವು ಸರಾಸರಿ 42 ರೂ. ನಿಗದಿ ಮಾಡಿದ್ದೇವೆ. ಈ ಹಣದ ಲೆಕ್ಕವನ್ನು ಆಡಿಟ್ ಮಾಡಿಸುತ್ತೇವೆ. ವೆಬ್​ಸೈಟ್​ನಲ್ಲಿ ಲೆಕ್ಕದ ಮಾಹಿತಿ ಹಾಕುತ್ತೇವೆ. ಜನರ ಹಣವನ್ನು ದುರುಪಯೋಗ ಮಾಡಿಕೊಳ್ಳುವ ದುರುದ್ದೇಶ ನಮ್ಮದಲ್ಲ.

# ರೈತರು ಮತ್ತು ಸಾಮಾನ್ಯ ಜನರು ಯಾವ ರೀತಿಯಲ್ಲಿ ಅಭಿಯಾನಕ್ಕೆ ಕೈ ಜೋಡಿಸಬಹುದು?

ಗಿಡದಿಂದ ಆರ್ಥಿಕ ಲಾಭ ಹೇಗೆ ಪಡೆಯಬಹುದು ಎಂಬುದನ್ನು ರೈತರಿಗೆ ತಿಳಿಸುತ್ತೇವೆ. ರೈತರು ಲಾಭ ಪಡೆಯುವಂತಾದಾಗ ಗಿಡ ನೆಡಲು ಮುಂದಾಗುತ್ತಾರೆ. ಇದಕ್ಕಾಗಿ ಸರ್ಕಾರದ ಹಂತದಲ್ಲಿ ಕೆಲವು ಕಾನೂನು ಬದಲಾವಣೆಯಾಗಬೇಕಿದೆ. ಇನ್ನೂ ಸಾಮಾನ್ಯ ಜನರು ಸ್ವಯಂಸೇವಕರಾಗಿ ಕೆಲಸ ಮಾಡಬಹುದು. ಇಲ್ಲವೆ, ಮನೆಯಲ್ಲೇ ಗಿಡ ಬೆಳೆಸಿ ನಮಗೆ ನೀಡಬಹುದು.

# ಕಾವೇರಿ ಕೇವಲ ಎರಡು ರಾಜ್ಯಗಳ ಸಮಸ್ಯೆ, ಇತರೆ ರಾಜ್ಯಗಳು ಹೇಗೆ ಸಹಾಯ ಮಾಡಲಿವೆ?

ಇದು ನಮ್ಮ ಮೊದಲ ಯೋಜನೆಯಾಗಿದೆ. ಕಾವೇರಿ ನೀರಿನ ಅವಶ್ಯಕತೆಯಿಂದಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಅಭಿಯಾನದಲ್ಲಿ ಕೈಜೋಡಿಸುತ್ತಿರುವುದು ಗಮನಾರ್ಹ. ಆದರೆ, ಇತರೆ ರಾಜ್ಯದಲ್ಲಿರುವ ಕೃಷ್ಣಾ, ನರ್ಮದಾ ಸೇರಿ ಇತರೆ ಪ್ರಮುಖ ನದಿಗಳ ಹರಿವು ಕೂಡ ಪ್ರತಿವರ್ಷ ಕಡಿಮೆಯಾಗುತ್ತಿದೆ. ಇದರ ಬಗ್ಗೆಯೂ ನಾವು ಗಮನ ಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ನದಿಗಳ ಪುನಶ್ಚೇತನಕ್ಕೂ ಮುಂದಾಗುತ್ತೇವೆ.

# ವೃತ್ತಿ ಮತ್ತು ಕುಟುಂಬದ ಮಧ್ಯೆ ಸಮಯ ನೀಡುವುದು ಮತ್ತು ಏಕಾಗ್ರತೆ ಹೆಚ್ಚಿಸುವುದಕ್ಕೆ ಏನು ಮಾಡಬೇಕು?

ದೇಹಕ್ಕೆ ಹೇಗೆ ನೀವು ವ್ಯಾಯಾಮ ಮಾಡುತ್ತೀರಿ. ಅದೇ ರೀತಿ ಮನಸ್ಸಿಗೂ ವ್ಯಾಯಾಮದ ಅವಶ್ಯಕತೆ ಇದೆ. ಧ್ಯಾನದಿಂದ ಏಕಾಗ್ರತೆ ಲಭ್ಯವಾಗಲಿದೆ. ಹೆಚ್ಚು ಆಲೋಚನೆ ಮಾಡುವುದು ಬಿಡಬೇಕು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...