ಮಾಜಿ ಸುಂದರಿಯೇ ಮೊದಲು ಇದಕ್ಕೆ ಉತ್ತರಿಸು ಎಂದು ಮತ್ತೊಮ್ಮೆ ನಟಿ ರಮ್ಯಾ ವಿರುದ್ಧ ಗರಂ ಆದ ಜಗ್ಗೇಶ್

ಬೆಂಗಳೂರು: ನೀರ್​ದೋಸೆ ಚಿತ್ರೀಕರಣ ಸಂದರ್ಭದಲ್ಲಿ ಶುರುವಾದ ನವರಾಸನಾಯಕ ಜಗ್ಗೇಶ್​ ಹಾಗೂ ಮೋಹಕತಾರೆ ರಮ್ಯಾ ನಡುವಿನ ಶೀತಲಸಮರ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಿನಿಮಾದಲ್ಲಿ ಆರಂಭವಾದ ಸಮರ ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಿದೆ.

ಕಾಂಗ್ರೆಸ್​ ಸೋಶಿಯಲ್​ ಮೀಡಿಯಾ ವಿಭಾಗದ ಮುಖ್ಯಸ್ಥೆಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿರುದ್ಧ ಸದಾ ಕೆಂಡಕಾರುವ ನಟ ಜಗ್ಗೇಶ್​ ಅವರು ಮತ್ತೊಮ್ಮೆ ರಮ್ಯಾ ವಿರುದ್ಧ ಗುಡುಗಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯವೈಖರಿ, ಹಿಂದಿನ ಹಾಗೂ ಇಂದಿನ ಸರ್ಕಾರಗಳ ಸರಿ-ತಪ್ಪು, ಭಾರತದ 10 ವರ್ಷದ ದೇಶ-ವಿದೇಶಾಂಗ ನೀತಿಯನ್ನು ಅಂಕಿ-ಅಂಶ ಸಮೇತ ನೋಡಿ. ಮತದಾನವನ್ನು ಕಡ್ಡಾಯವಾಗಿ ಮಾಡಿ ಎಂದು ಹೇಳಿ ನೀವ್ಯಾಕೆ ಮಂಡ್ಯದಿಂದ ಪರಾರಿಯಾದ್ರಿ? ನಿಮ್ಮನ್ನು ಸಂಸದೆಯನ್ನಾಗಿ ಮಾಡಿದ ಮಂಡ್ಯವನ್ನು ಯಾಕೆ ಖಾಲಿ ಮಾಡಿದ್ರಿ? ನಿವೃತ್ತ ಸುಂದರಿ ಮೊದಲು ಇದಕ್ಕೆ ಉತ್ತರಿಸಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿ ಎಂದು ಜಗ್ಗೇಶ್​ ತಮ್ಮ ಟ್ವೀಟ್​ ಮೂಲಕ ರಮ್ಯಾರನ್ನು ಕುಟುಕಿದ್ದಾರೆ.

ಸಹವಾಸ ದೋಷದಲ್ಲಿ ಸನ್ಯಾಸಿಕೆಟ್ಟ ಎಂಬ ಗಾದೆಮಾತು ನೆನಪಿದೆಯಾ? ಸಹವಾಸ ಯಾರದ್ದು? ಸನ್ಯಾಸಿ ಯಾರು? ಯಜಮಾನಿಗೆ ಮಾತಾಡಲು ಬರುವುದಿಲ್ಲ ಅಂದಮೇಲೆ ಅವರ ಮನೆ ಮುಸುರೆ ತಿಕ್ಕುವವರಿಗೆ ಬರುತ್ತದೆಯೇ? ರಾಜನಂತೆ ಪ್ರಜೆ ಎಂದು ಮಾರ್ಮಿಕವಾಗಿ ಟ್ವೀಟ್​ ಮಾಡಿರುವ ಜಗ್ಗೇಶ್​, ಪರೋಕ್ಷವಾಗಿ ರಾಹುಲ್​ ಗಾಂಧಿ ಹಾಗೂ ರಮ್ಯಾರಿಗೆ ಟಾಂಗ್​ ನೀಡಿದ್ದಾರೆನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

One Reply to “ಮಾಜಿ ಸುಂದರಿಯೇ ಮೊದಲು ಇದಕ್ಕೆ ಉತ್ತರಿಸು ಎಂದು ಮತ್ತೊಮ್ಮೆ ನಟಿ ರಮ್ಯಾ ವಿರುದ್ಧ ಗರಂ ಆದ ಜಗ್ಗೇಶ್”

  1. Dear Ramya madam, will u challenge to your supreme as u challenged in Arasu film acted by u to film hero, without using his father’s name earn Rs. 5000.00 per month just as a common man.

Comments are closed.