19 C
Bengaluru
Saturday, January 18, 2020

ಚಳಿಗಾಲದಲ್ಲಿ ಬೆಲ್ಲದ ಉಪಯೋಗ; ಇಲ್ಲಿವೆ ಬೆಲ್ಲದಂತಹ ಹತ್ತು ಸಲಹೆಗಳು

Latest News

ರಚಿತಾ-ಚಿರು ಏಪ್ರಿಲ್ ಶುರು

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ನಟಿ ರಚಿತಾ ರಾಮ್ ಅವರಿಗೆ ಈಗ ‘ಏಪ್ರಿಲ್’ ಶುರುವಾಗಿದೆ. ‘ಇದೇನಿದು.. ಜನವರಿಯಲ್ಲಿ ಇವರಿಗಷ್ಟೇ ಹೇಗೆ ಏಪ್ರಿಲ್?!’...

ಶಿವಕುಮಾರ ಸ್ವಾಮೀಜಿ ಪ್ರಥಮ ಪುಣ್ಯಸಂಸ್ಮರಣೋತ್ಸವ ನಾಳೆ: ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ತುಮಕೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರಥಮ ಪುಣ್ಯಸಂಸ್ಮರಣೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ನಾಡಿನೆಲ್ಲೆಡೆಯಿಂದ 1 ಲಕ್ಷ ಜನ ಭಾಗಿಯಾಗುವ...

ಜೀ ಕನ್ನಡದಲ್ಲಿ ಇಂದಿನಿಂದ ಜೀನ್ಸ್ ಶೋ

ಬೆಂಗಳೂರು: ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ವಾಹಿನಿಯು ಇದೀಗ ‘ಜೀನ್ಸ್’ ಎಂಬ ಫ್ಯಾಮಿಲಿ ಎಂಟರ್​ಟೇನ್​ವೆುಂಟ್​ನ ಕಾರ್ಯಕ್ರಮ ಆರಂಭಿಸಿದೆ. ಈ ವಿನೂತನ...

ನಾಳೆ ಪೋಲಿಯೋ ದಿನ

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನವಾದ ಭಾನುವಾರ ರಾಜ್ಯದಲ್ಲಿ 0-5 ವರ್ಷದೊಳಗಿನ 64,65,561 ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ. ಕಾರ್ಯಕ್ರಮಕ್ಕೆ 33,021 ಬೂತ್​ಗಳು,...

ನಿಜವಾದ ಕಲೆ ಯಾವುದು?

ವಿಕ್ರಮ ಸಿಂಹ ಎಂಬ ರಾಜ ಕಲೆಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದ. ಅರಮನೆಯಲ್ಲಿ ಕಲಾಕೊಠಡಿ ಇದ್ದು, ಆಸ್ಥಾನದಲ್ಲಿ ಸಾಕಷ್ಟು ಕಲಾವಿದರಿದ್ದರು, ಹೊರಗಡೆಯಿಂದಲೂ ಒಳ್ಳೊಳ್ಳೆಯ ಕಲಾವಿದರು...

ಬೆಲ್ಲದ ಬಳಕೆ ಚಳಿಗಾಲದಲ್ಲಿ ಉತ್ತಮ. ಬೆಲ್ಲ ಅಂದರೆ ಸಕ್ಕರೆಯ ಇನ್ನೊಂದು ರೂಪ ಅಥವಾ, ಶುದ್ಧಿಕರಿಸದ ಸಕ್ಕರೆ ಎನ್ನಬಹುದು.

ಸಕ್ಕರೆಗೆ ಪರ್ಯಾಯವಾಗಬಲ್ಲ ಬೆಲ್ಲ, ಸಕ್ಕರೆ ಕಾಯಿಲೆ ಇರುವವರು ಬಳಸುತ್ತಾರೆ. ರಕ್ತದೊಳಗೆ ಸಕ್ಕರೆ ಅಂಶ ಕಡಿಮೆಯಾಗಲು ಇದನ್ನು ಬಳಸಬಹುದು ಉತ್ತಮ.

ಈ ಮೊದಲು ನಮ್ಮ ಹಿರಿಯರು ಸಕ್ಕರೆಗಿಂತ ಅಧಿಕವಾಗಿ ಬೆಲ್ಲವನ್ನೇ ಬಳಸುತ್ತಿದ್ದರು. ಇದರ ಮಹತ್ವ ಅವರಿಗೆ ಅಷ್ಟು ಅರಿವಿತ್ತು.

1. ಬೆಲ್ಲವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಆದ್ದರಿಂದ ಇದು ರಕ್ತದೊತ್ತಡ ಇರುವವರಿಗೆ ಉತ್ತಮ ಮನೆ ಮದ್ದು ಹೌದು. ಬೆಲ್ಲದ ಬಳಕೆಯಿಂದ ಅಪಧಮನಿಗಳು ಹಿಗ್ಗಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಪರಿಚಲನೆ ಉತ್ತಮಗೊಂಡು ರಕ್ತದೊತ್ತಡ ನಿಯಂತ್ರಣ ಸಾಧ್ಯ.

2. ಊಟದ ನಂತರ ಸಣ್ಣ ಬೆಲ್ಲದ ತುಣುಕನ್ನು ತಿಂದರೆ ಜೀರ್ಣಶಕ್ತಿಗೆ ಇದು ಸಹಾಯ ಮಾಡುತ್ತದೆ. ಜೀರ್ಣಶಕ್ತಿ ಪ್ರಕ್ರಿಯೆ ಸುಗಮವಾಗುವುದರಿಂದ ಅಸಿಡಿಟಿ, ತೇಗು, ಗ್ಯಾಸ್​ ಟ್ರಬಲ್​ನಿಂದ ಮುಕ್ತಿ ಸಾಧ್ಯ.

3. ಮಲಬದ್ಧತೆಗೆ ಬೆಲ್ಲ ಉತ್ತಮ ಪರಿಹಾರ. ಇದಕ್ಕೆ ಬೆಲ್ಲದಲ್ಲಿರುವ ಫೈಬರ್​ ಅಂಶವೇ ಕಾರಣ.

4. ಬೆಲ್ಲದ ಉಪಯೋಗದಿಂದ ಯಕೃತ್​ಗೂ ಉತ್ತಮ ಫಲಕಾರಿ. ಇದರೋಲಗಿನ ಜಿಂಕ್​ ಅಂಶ ಯಕೃತ್​ನ್ನು ಸ್ವಚ್ಛಗೊಳಿಸುತ್ತದೆ. ಆಯುರ್ವೇದದಲ್ಲಿ ಬೆಲ್ಲವನ್ನು ರಕ್ತ ಶುದ್ಧಿಗೆ ಮತ್ತು ಯಕೃತ್​ ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು.

5. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾದ ಕೆಮ್ಮು, ಶೀತ, ಜ್ವರದಿಂದ ರಕ್ಷಣೆ ಸಾಧ್ಯ. ಒಂದು ಲೋಟ ನೀರಿಗೆ ಒಂದು ಟೀ ಚಮಚದಷ್ಟು ಬೆಲ್ಲದ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಶೀತ, ನೆಗಡಿ, ಬರುವುದನ್ನು ತಪ್ಪಿಸಬಹುದು.

6. ವಾಯು ಮಾಲಿನ್ಯವಾಗುತ್ತಿರುವ ಈ ಸಂದರ್ಭದಲ್ಲಿ ಬೆಲ್ಲದ ಉಪಯೋಗ ಅಗತ್ಯ. ಬೆಲ್ಲವು ಶ್ವಾಸಕೋಶಗಳ ಸ್ವಚ್ಛತೆಗೊಳಿಸುತ್ತದೆ. ಇದರಿಂದ ಅಸ್ತಮಾ, ನ್ಯುಮೋನಿಯಾಗಳನ್ನು ಉಪಶಮನಗೊಳಿಸಬಹುದು.

7. ದೇಹದೊಳಗಿನ ಉಷ್ಣಾಂಶದ ಸಮತೋಲಕ್ಕೆ ಚಳಿಗಾಲದಲ್ಲಿ ಬೆಲ್ಲ ಸಹಕಾರಿ. ಕಬ್ಬಿಣಾಂಶ, ಜಿಂಕ್​, ಮ್ಯಾಗ್ನೇಸಿಯಂ ಮತ್ತು ಪ್ರಾಸ್ಪರಸ್​ನಂತಹ ಅಂಶಗಳು ಉಷ್ಣವನ್ನು ನಿಯಂತ್ರಿಸುತ್ತವೆ.

8. ಬೆಲ್ಲದೊಳಗಿನ ಕಬ್ಬಿಣಾಂಶವು ಗರ್ಭಿಣಿಯರಿಗೆ, ಅನಿಮಿಯಾದಿಂದ ಬಳಲುತ್ತಿರುವವರಿಗೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್​ ಕಡಿಮೆ ಇರುವವರಿಗೆ ಉಪಯುಕ್ತ.

9. ಸಂಧಿ ನೋವುಗಳು ಚಳಿಗಾಲದಲ್ಲಿ ಸಾಮಾನ್ಯ ಸಂಗತಿ. ಇದಕ್ಕೆ ಮನೆ ಮದ್ದುವಿನಿಂದ ತಯಾರಿಸಬಹುದಾದ ಸಿಹಿ ಉಂಡೆಯಿಂದ ಪರಿಹಾರ ಸಾಧ್ಯ. ಒಣಗಿದ ಶುಂಠಿ ಪುಡಿ 1/2 ಚಮಚ, ಕಪ್ಪು ಎಳ್ಳು 1 ಚಮಚ ಇದಕ್ಕೆ ತುಪ್ಪ ಮತ್ತು ಬೆಲ್ಲದ ಪುಡಿಯನ್ನು ಮಿಶ್ರಣ ಮಾಡಿ ಸೇವನೆ ಮಾಡಬಹುದು.

10. ತಿಂಗಳ ಸಮಸ್ಯೆ ಇರುವ ಮಹಿಳೆಯರು ಒಂದು ಚಮಚ ಪುಡಿ ಬೆಲ್ಲ ಮತ್ತು ಒಂದು ಚಮಚದಷ್ಟು ಎಳ್ಳು ಸೇವನೆಯಿಂದ ಸಮಸ್ಯೆ ಬಗೆಹರಿಸಲು ಸಾಧ್ಯ.

ಸಕ್ಕರೆ ಕಾಯಿಲೆ ಇರುವವರು ಬೆಲ್ಲದ ಉಪಯೋಗಕ್ಕೆ ಮಿತಿ ಹಾಕಿಕೊಳ್ಳಬೇಕು. ಇದು ಕೂಡ ರಕ್ತದೊಳಗಿನ ಸಕ್ಕರೆ ಪ್ರಮಾಣವನ್ನು ಏರುಪೇರು ಮಾಡಬಲ್ಲದು. ಬೆಲ್ಲದಲ್ಲಿ ಕ್ಯಾಲರಿ ಪ್ರಮಾಣ ಹೆಚ್ಚಿರುವುದರಿಂದ ಬಳಕೆಯಲ್ಲಿ ಮಿತಿ ಇರಲಿ. ಕೆಲವರು ಬೆಲ್ಲ ತಿನ್ನುವ ಅಭ್ಯಾಸವನ್ನೇ ರೂಢಿಸಿಕೊಂಡಿರುತ್ತಾರೆ. ಇದು ಬೇಡ. ಅಲ್ಲದೆ ಸಿಹಿ ಪದಾರ್ಥ ತಯಾರಿಸುವಾಗ ಸಕ್ಕರೆ ಬದಲಿಗೆ ಹೆಚ್ಚು ಬೆಲ್ಲವನ್ನು ಪರ್ಯಾಯವಾಗಿ ಬಳಸುವುದು ಸರಿಯಲ್ಲ. ಆದಾಗ್ಯೂ, ಆರೋಗ್ಯದ ವಿಚಾರದಲ್ಲಿ ಪರಿಣತರ ಶಿಫಾರಸಿನ ಮೇರೆಗೆ ನಡೆದುಕೊಳ್ಳುವುದು ಉತ್ತಮ ಎಂಬುದು ನಮ್ಮ ಸಲಹೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...