ಕೊಡದಗುಡ್ಡದಲ್ಲಿ ರಥ ಲೋಕಾರ್ಪಣೆ

ಜಗಳೂರು: ತಾಲೂಕಿನ ಕೊಡದಗುಡ್ಡದಲ್ಲಿ ಶುಕ್ರವಾರ ವೀರಭದ್ರಸ್ವಾಮಿಯ ನೂತನ ರಥ ಲೋಕಾರ್ಪಣೆ ಹಾಗೂ ಧರ್ಮ ಸಭೆ ನಡೆಯಿತು. ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ರಾಮಘಟ್ಟ ಉಚ್ಚಂಗಿದುರ್ಗದ ಕಟ್ಟೀಮನೆ ರಾಜಗುರು ಪುರವರ್ಗ ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಭೂಮಿಯ ಯುಗಾಂತ್ಯದವರೆಗೂ ಸಾರಬೇಕು ಎಂದು ಹೇಳಿದರು.

ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಹಸ್ತಗಳಿಗೆ ಧಾನ, ಧರ್ಮ, ಸತ್ಯ, ನ್ಯಾಯಗಳೆ ಭೂಷಣಗಳಾಗಿವೆ ಎಂದು ತಿಳಿಸಿದರು.

ಶುಕ್ರವಾರ ಬೆಳಗ್ಗೆ 6ಕ್ಕೆ ಗಣಪತಿ, ಚಂಡಿಕಾ, ಮಹಾರುದ್ರ ಹೋಮ, ಮಹಾ ರುದ್ರಾಭಿಷೇಕ, ಕಾಳಿಕಾಂಬದೇವಿ ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಮಾರ್ಚ್ 22ಕ್ಕೆ ಮಹಾರಥೋತ್ಸವ ಜರುಗಲಿದೆ.