More

    ಜಗಳೂರಿನಲ್ಲಿ ಶಿಲಾಯುಗದ ಕಲ್ಲುವೃತ್ತ ಸಮಾಧಿ ಪತ್ತೆ

    ಜಗಳೂರು: ತಾಲೂಕಿನ ಸೂರಗೊಂಡನಹಳ್ಳಿ ಮತ್ತು ಕಲ್ಲೇನಹಳ್ಳಿ ಗ್ರಾಮಗಳ ನಡುವೆ ಇರುವ ಮಾಳಜ್ಜಿ ಕಲ್ಲು ಬೆಟ್ಟದ ತಪ್ಪಲಿನಲ್ಲಿ10 ರಿಂದ 12 ಬೃಹತ್ ಶಿಲಾಯುಗದ ಕಲ್ಲುವೃತ್ತ ಸಮಾಧಿಗಳು ಪತ್ತೆಯಾಗಿವೆ.

    ಪಟ್ಟಣದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾದ ಇವು ಕ್ರಿ.ಪೂ 1200ರ ಕಾಲಘಟ್ಟದ ಸಮಾಧಿಗಳು ಎಂದು ಪ್ರಾಕ್ತನಶಾಸ್ತ್ರದ ಉಪನ್ಯಾಸಕ ಡಾ.ಪಿ.ಬಿ. ಮಂಜಣ್ಣ ದೊಡ್ಡಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಆ ಕಾಲದ ಮಾನವರು ಮರಣದ ಬಳಿಕ ಮಾನವನ ದೇಹವನ್ನು ಸಂಸ್ಕಾರ ಮಾಡಿ ಅದರ ಸುತ್ತ ಕಲ್ಲು ವೃತ್ತಗಳನ್ನು ನೆಟ್ಟು ಹೋಗುವ ಸಂಪ್ರದಾಯವಿತ್ತು. ಹೀಗಾಗಿ, ಅವುಗಳನ್ನು ಕಲ್ಲುವೃತ್ತ ಸಮಾಧಿಗಳು ಎಂದು ಕರೆಯಲಾಗುತ್ತದೆ.

    ನೆಲಮಟ್ಟದಲ್ಲಿ ಕಲ್ಲುಗಳನ್ನು ವೃತ್ತಾಕಾರವಾಗಿ ಜೋಡಿಸುವ ಪದ್ಧತಿಯಿತ್ತೆಂದು ತಿಳಿದು ಬಂದಿದೆ. ಇಲ್ಲಿ ಪ್ರತಿ ಸಮಾಧಿಗೆ ಒಂದು ವೃತ್ತಾಕಾರ ಇದೆ.

    ಪ್ರಸ್ತುತ ಮಾಳಜ್ಜಿ ಕಲ್ಲು ಪ್ರದೇಶದಲ್ಲಿರುವ ಸಮಾಧಿಗಳಲ್ಲಿ ವೃತ್ತಾಕಾರದ ಸಣ್ಣಪ್ರಮಾಣದ ಗುಂಡು ಜೋಡಿಸಲಾಗಿದೆ. ಇವುಗಳ ವ್ಯಾಸ 20/20 ಅಡಿಗಳಾಗಿವೆ.

    ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮಡಕೆ ಕುಡಿಕೆಗಳ ಚೂರುಗಳು ದೊರೆತಿವೆ. ಪ್ರಸ್ತುತ ಈ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ.

    2014ರಲ್ಲಿ ಜಗಳೂರು ತಾಲೂಕಿನ ಗುಹೇಶ್ವರ ಬೆಟ್ಟದ ತಪ್ಪಲಿನಲ್ಲಿ ಇದೇ ಮಾದರಿಯ ಸುಮಾರು 25 ಸಮಾಧಿಗಳು ಪತ್ತೆಯಾಗಿದ್ದವು. ಇನ್ನೂ ಹೆಚ್ಚಿನ ಕ್ಷೇತ್ರ ಕಾರ್ಯ ಕೈಗೊಂಡರೆ ಬೆಟ್ಟದ ತಪ್ಪಲು, ಗುಹೆಗಳಲ್ಲಿ ಆ ಕಾಲಘಟ್ಟಕ್ಕೆ ಸೇರಿದ ವಿಶೇಷಗಳು ದೊರೆಯುವುದರಲ್ಲಿ ಸಂಶಯವಿಲ್ಲ.
    -ಡಾ.ಪಿ.ಬಿ. ಮಂಜಣ್ಣ ದೊಡ್ಡಬೊಮ್ಮನಹಳ್ಳಿ. ಪ್ರಾಕ್ತನಶಾಸ್ತ್ರ ಉಪನ್ಯಾಸಕ, ಸ.ಪ್ರ.ದ. ಕಾಲೇಜು ಗಂಗಾವತಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts